ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚಾರ

RAIL
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು ಎಸ್​ಎಸ್​ಎಸ್ ಹುಬ್ಬಳ್ಳಿ - ಯೋಗ ನಗರಿ ರಿಷಿಕೇಶ - ಎಸ್​ಎಸ್​ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚಾರ ಪ್ರಾರಂಭಿಸಿದೆ.

ಹುಬ್ಬಳ್ಳಿಯಿಂದ ಜ. 6, 13, 20, 27, ಫೆ. 3, 10 ರಿಂದ 24ರವರೆಗಿನ ಪ್ರತಿ ಸೋಮವಾರ ಹೊರಡುವ ರೈಲು, ಬುಧವಾರ ರಾತ್ರಿ 11.30ಕ್ಕೆ ಯೋಗ ನಗರಿ ರಿಷಿಕೇಶ ತಲುಪಲಿದೆ.

ಯೋಗ ನಗರಿ ರಿಷಿಕೇಶನಿಂದ ಪ್ರತಿ ಸೋಮವಾರ ರಾತ್ರಿ 8.30ಕ್ಕೆ ಹೊರಡುವ ರೈಲು, ಜ. 9, 16 ರಿಂದ 30, ಫೆ. 6. 13 ರಿಂದ 27ರ ಪ್ರತಿ ಗುರುವಾರ ಬೆಳಗ್ಗೆ 6.15ಕ್ಕೆ ಹೊರಟು, ಶನಿವಾರ ಬೆಳಗ್ಗೆ 6.30ಕ್ಕೆ ಹುಬ್ಬಳ್ಳಿ ತಲುಪಲಿದೆ.

ಈ ರೈಲು ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಡ್, ಸತಾರಾ, ಪುಣೆೆ, ದೌಂಡ್ ಕಾರ್ಡ್​ಲೈನ್, ಅಹ್ಮದನಗರ, ಕೋಪರ್ಗಾಂವ್, ಮನ್ಮಾಡ್ ಜಂಕ್ಷನ್, ಭೂಸಾವಲ್ ಜಂಕ್ಷನ್, ಹರ್ದಾ, ಇಟಾರ್ಸಿ ಮತ್ತಿತರ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net