

ಹುಬ್ಬಳ್ಳಿ : ಕುಂಭಮೇಳದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣ ಮತ್ತು ಉತ್ತರ ಪ್ರದೇಶದ ವಾರಣಾಸಿ ನಿಲ್ದಾಣಗಳ ಮಧ್ಯೆ 3 ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ಪ್ರಾರಂಭಿಸಲಾಗಿದೆ.
ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಫೆ. 14, 21 ಮತ್ತು 28 ರಂದು (ಶುಕ್ರವಾರ) ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು, ಭಾನುವಾರ ಬೆಳಗಿನಜಾವ 5.30ಕ್ಕೆ ವಾರಣಾಸಿ ತಲುಪಲಿದೆ.
ವಾರಣಾಸಿಯಿಂದ ಫೆ. 17, 24 ಮತ್ತು ಮಾರ್ಚ್ 3ರಂದು (ಸೋಮವಾರ) ಬೆಳಗಿನಜಾವ 5 ಗಂಟೆಗೆ ಹೊರಡುವ ರೈಲು, ಬುಧವಾರ ಮಧ್ಯಾಹ್ನ 12.45ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.