

ಮಂಡ್ಯ: .ಆರ್.ಸಾಗರ ಕೃಷ್ಣರಾಜಸಾಗರ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಮಠದಲ್ಲಿ 353ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಪೂರ್ವಾರಾಧನೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅರ್ಚಕ ಶ್ರೀ ಹಾವೇರಿ ರಾಘವೇಂದ್ರ ಚಾರ್ಯ ನೇತೃತ್ವದಲ್ಲಿ ಶ್ರೀ ರಾಘವೇಂದ್ರಸ್ವಾಮಿಗೆ ಬೆಳಗ್ಗೆಯಿಂದ ಸುಪ್ರಭಾತ, ವೇದ ಪಾರಾಯಣ ನಡೆಯಿತು. ನಂತರ ಪಾದಪೂಜೆ, ನಡೆದು ಶ್ರೀ ರಾಘವೇಂದ್ರಸ್ವಾಮಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಅರ್ಚಕ ಸುರೇಂದ್ರಚಾರ್ಯ ಮತ್ತು ಶ್ರೀ ವಿಜೇಂದ್ರಚಾರ್ಯ ಉಪಸ್ಥಿತರಿದ್ದರು.