

ಮುದಗಲ್: ಪಟ್ಟಣದಲ್ಲಿ ಬುಧವಾರ ಆರ್ಯವೈಶ್ಯ ಸಮುದಾಯದಿಂದ ಶ್ರೀ ವಾಸವಿ ಜಯಂತಿ ಆಚರಿಸಲಾಯಿತು. ನಗರೇಶ್ವರ ದೇವಸ್ಥಾನದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ಮೂರ್ತಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ನೈವೇದ್ಯ ಸಮರ್ಪಣೆ, ತೊಟ್ಟಿಲು ಸೇವೆ ನೆರವೇರಿತು. ನಂತರ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಂದ ಪೂರ್ಣ ಕುಂಭಗಳ ಮೆರವಣಿಗೆ ಜರುಗಿತು. ಆಮದಿಹಾಳ, ನಾಗಲಾಪುರ ಹಾಗೂ ವಿವಿಧ ಗ್ರಾಮದ ಆರ್ಯವೈಶ್ಯ ಸಮುದಾಯದ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.