

ವಿಜಯಪುರ :ದಸರಾ ಬಂದ್ರೆ ಸಾಕು ವಿಜಯಪುರ ನಗರದ ಯುವ ಜನತೆ ಫುಲ್ ಹ್ಯಾಪಿ... ಬೆಳಗ್ಗೆ ಮಹಿಳೆಯರು ದುರ್ಗಾಮಾತಾ ಪೂಜೆಯಲ್ಲಿ ಭಾಗಿಯಾದ್ರೆ ಸಂಜೆ ಕಲರ್‌ಫುಲ್ ದಾಂಡಿಯಾ ಉತ್ಸವದಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸ್ತಾರೆ ವಿಜಯಪುರ ದಸರಾ ವೇಳೆ 2 ದಿನಗಳ ಕಾಲ ನಡೆಯುವ ದಾಂಡಿಯಾ ಉತ್ಸವ ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿ ಯುವಕ ಯುವತಿಯರು ಕೋಲಾಟ ಆಡಿ ಡಿಜೆ ಸಾಂಗ್‌ಗಳಿಗೆ ಸ್ಟೆಪ್ಸ್ ಹಾಕಿ ಸಖತ್ ಎಂಜಾಯ್ ಮಾಡ್ತಾರೆ.
ನವರಾತ್ರಿ ಉತ್ಸವ ಅಂಗವಾಗಿ. ಕನ್ನಡದ ನಂ.1 ದಿನಪತ್ರಿಕೆ 'ವಿಜಯವಾಣಿ' ಮಾಧ್ಯಮ ಸಹಯೋಗದಲ್ಲಿ ವಿಜಯಪುರ ನಗರದ ಜ್ಞಾನ ಯೋಗ ಆಶ್ರಮ ರಸ್ತೆಯ ಕಿತ್ತೂರ ರಾಣಿ ಚೆನ್ನಮ್ಮ ಸಂದಾಯ ಭವನದಲ್ಲಿ ಸನ್ ಶೈನ್ ಪ್ರೊಡಕ್ಷನ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಬಾಲಿವುಡ್ ಗರ್ಬಾ ಹಾಗೂ ದಾಂಡಿಯಾ ನೈಟ್ ವಿಶೇಷ ಕಾರ್ಯಕ್ರಮದಲ್ಲಿ ದಸರಾ ವೇಳೆ ನಡೆಯುವ ದಾಂಡಿಯಾ ಉತ್ಸವ ವಿವಿಧತೆಯಲ್ಲಿ ಏಕತೆ ಸಾರುವ ಸಂಸ್ಕೃತಿ ಸಂಗಮ. ಕನ್ನಡ,ಹಿಂದಿ ಮರಾಠಿ, ಗುಜರಾತಿ, ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆಯಾ ಭಾಷೆಯ ಸಾಂಪ್ರದಾಯಿಕ ಹಾಡುಗಳಿಗೆ ಕೋಲಾಟವಾಡುತ್ತಾ ಯುವಕ ಯುವತಿಯರು ಹೆಜ್ಜೆ ಹಾಕುತ್ತಾ. ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂಡಿ ದಾಂಡಿಯಾದಲ್ಲಿ ಭಾಗಿಯಾಗಿ ಸಂಭ್ರಮಿಸಿದರು ನವರಾತ್ರಿ ಅಂದಾಕ್ಷಣ ವಿಜಯಪುರದ ಜನತೆಗೆ ಮೊದಲು ನೆನಪಾಗುವುದು ದಾಂಡಿಯಾ.
ಕೇವಲ ಗುಜರಾತ್, ಮಹಾರಾಷ್ಟ್ರ ಭಾಗದಲ್ಲಿ ಆಚರಣೆಯಲ್ಲಿರುವ ಈ ದಾಂಡಿಯಾ, ಗರ್ಬಾ ನೃತ್ಯವನ್ನು ವಿಜಯಪುರ ಸಹ ಆಚರಿಸಿಕೊಂಡು ಬರುತ್ತಿರುವುದು ವಿಶೇಷ. ನವರಾತ್ರಿಯ ಒಂಭತ್ತು ದಿನಗಳ ಕಾಲವೂ ನಗರದ ವಿವಿಧೆಡೆ ದಾಂಡಿಯಾ ಆಯೋಜಿಸುವ ಮೂಲಕ ಜನರು ಸಂಭ್ರಮದಿಂದ ಹಬ್ಬವನ್ನು ಆಚರಿಸಿ ಗಮನ ಸೆಳೆದಿದ್ದಾರೆ. ವಿಶೇಷವಾಗಿ ಕನ್ನಡದ ನಂ 1 ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಯೋಗದಲ್ಲಿ ಮತ್ತು ಸನ್ ಶೈನ್ ಪ್ರೊಡಕ್ಷನ್ ಅವರ ವತಿಯಿಂದ ಏರ್ಪಡಿಸಿದ ದಾಂಡಿಯಾ ನೃತ್ಯವನ್ನು ಆಯೋಜಿಸುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸಂಭ್ರಮಿಸಲು ಅನುಕೂಲವಾಗಿದೆ
ಎಂದು ಶೈಲಜಾ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು ಸನ್‌ಶೈನ್ ಪ್ರೊಡಕ್ಷನ್ ಸಂಸ್ಥೆಯ ಪಲ್ಲವಿ ವಾಯದಂಡೆ ಕಾರ್ಯಕ್ರಮ ನಿರೂಪಿಸಿ, ಮೇಲುಸ್ತುವಾರಿ ವಹಿಸಿದ್ದರು. ಶೈಲಜಾ ಬಸನಗೌಡ ಪಾಟೀಲ ಯತ್ನಾಳ, ಪ್ರೀತಿ ವಿಜುಗೌಡ ಪಾಟೀಲ, ರಾಮನಗೌಡ ಬಸನಗೌಡ ಪಾಟೀಲ, ಇತರೆ ಗಣ್ಯರು, ವಿಜಯವಾಣಿ ಪ್ರಸಾರಾಂಗ ವ್ಯವಸ್ಥಾಪಕ ಈರಣ್ಣ ಅವಟಿ ಉಪಸ್ಥಿತರಿದ್ದರು. ಸೆ. 28ರಂದು ಸಂಜೆ 6 ಗಂಟೆಗೆ ದಾಂಡಿಯಾ ನೃತ್ಯ ನಡೆಯಲಿದೆ.