ಅಕ್ಟೋಬರ್​ ರಜೆಯಲ್ಲಿ ವಿಶೇಷ ತರಗತಿ

Special class during October vacation
Published on

ಬಬಲೇಶ್ವರ : ತಾಲೂಕಿನ ಮಮದಾಪುರ ಕರ್ನಾಟಕ ಪಬ್ಲಿಕ್​ ಶಾಲೆ ಶಿಕ್ಷಕರು ಅಕ್ಟೋಬರ್​ ರಜೆ ಅವಧಿಯಲ್ಲಿಯೂ ಸ್ವಯಂ ಪ್ರೇರಣೆಯಿಂದ ಎಸ್​ಎಸ್​ಎಲ್​ಸಿ ಕಲಿಯುತ್ತಿರುವ 200ಕ್ಕೂ ಅಧಿಕ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಇದಕ್ಕಾಗಿಯೇ ಪ್ರತ್ಯೇಕ ವೇಳಾಪಟ್ಟಿಯನ್ನು ಸಿದ್ಧಪಡಿಸಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 1&30ರವರೆಗೆ ತರಗತಿಗಳು ನಡೆಯಲಿದೆ. ಶಿಕ್ಷಕರ ನಿರ್ಧಾರಕ್ಕೆ ಉಪಪ್ರಾಚಾರ್ಯ ರಾವೇಂದ್ರ ಪುರೋಹಿತ ಅಭಿನಂದನೆ ತಿಳಿಸಿದ್ದಾರೆ.

ಜೊತೆಗೆ ಎನ್​ಎಂಎಂಎಸ್​ ಪರೀೆ ಬರೆಯುವ 8ನೇ ತರಗತಿ ವಿದ್ಯಾರ್ಥಿಗಳಿಗೂ ವಿಶೇಷ ತರಗತಿ ಆಯೋಜಿಸಲಾಗುತ್ತಿದದು, ಪಾಲಕರು ಎಸ್​ಎಸ್​ಎಲ್​ಸಿ ಕಲಿಯುತ್ತಿರುವ ತಮ್ಮ ಮಕ್ಕಳನ್ನು ನಿಯಮಿತವಾಗಿ ಹಾಜರಾಗಲು ಸಹಕರಿಸಬೇಕು. ವಿವಿಧ ಗ್ರಾಮಗಳಿಂದ ಬರುವ ಮಕ್ಕಳಿಗೆ ಬಂದು ಹೋಗಲು ವ್ಯವಸ್ಥೆ ಹಾಗೂ ಮಧ್ಯಾಹ್ನದ ಬಿಸಿಊಟ ಇಲ್ಲದಿರುವುದರಿಂದ ಲು ಉಪಾಹಾರದ ವ್ಯವಸ್ಥೆ ಮಾಡಿಕಳಿಸಲು ವಿನಂತಿಸಿದ್ದಾರೆ. ವಿನಂತಿಸಿದ್ದಾರೆ.

ಎನ್​ ಎಮ್​ ಎಮ್​ ಎಸ್​ ಮಕ್ಕಳಿಗೆ ತರಗತಿ : ಇದೇ ವೇಳೆ ಎನ್​ ಎಮ್​ ಎಮ್​ ಎಸ್​ ಪರೀೆ ಬರೆಯುವ 8 ನೇ ತರಗತಿ ಮಕ್ಕಳಿಗೆ ತರಗತಿಗೆ ಆಯೋಜನೆ ವಿಶೇಷ ತರಗತಿ ಅಯೋಜಿದ್ದು ಹಾಜರಾಗಲು ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net