

ಕಾರವಾರ: ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ
ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ನೀಡುವ ಉದ್ದೇಶದಿಂದ ಕರ್ನಾಟಕ ವಸತಿ ಶಿಕ್ಷಣ
ಸಂಸ್ಥೆಗಳ ಸಂಘವನ್ನು ಸ್ಥಾಪಿಸಲಾಗಿದ್ದು, ಇದರ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ, ಹಿಂದುಳಿದ ವರ್ಗಗಳ ಮೊರಾರ್ಜಿ
ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಡಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ
ಮತ್ತು ಶ್ರೀ ನಾರಾಯಣ ಹುರು ಇತ್ಯಾದಿ ಹೆಸರಿನ ಒಟ್ಟು 817 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾರಂಭಿಕ
ತರಗತಿಯಾದ 6 ನೇ ತರಗತಿ 2025-26 ನೇ ಸಾಲಿನ ಪ್ರವೇಶಕ್ಕಾಗಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.
ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ಒಟ್ಟು 41,500 ಸ್ಥಾನಗಳು ಲಭ್ಯವಿದ್ದು, ಸದರಿ ಸ್ಥಾನಗಳಿಗೆ ಎರಡು ವಿಧಾನಗಳ
ಮೂಲಕ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು. ಇದರಲ್ಲಿ ಶೇ.50% ರಷ್ಟು(20750) ಸ್ಥಾನಗಳನ್ನು ಪ್ರವೇಶ ಪರೀಕ್ಷೆ
ಮೂಲಕ ದಾಖಲಾತಿ ಹಾಗೂ ಶೇ.50% ರಷ್ಟು(20750) ಸ್ಥಾನಗಳನ್ನು ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ
ದಾಖಲಾತಿ ಮಾಡಿಕೊಳ್ಳವ ಅವಕಾಶವನ್ನು ಕಲ್ಪಿಸಲಾಗಿದೆ.
ವಿಶೇಷ ವರ್ಗಗಳಾದ ಸಫಾಯಿ ಕರ್ಮಚಾರಿ/ ಗುರುತಿಸಿರುವ ಮ್ಯಾನ್ಯಯಲ್ ಸ್ಕಾö್ಯವೇಂಜರ್/ ಚಿಂದಿ ಆಯುವವರು/
ಸ್ಮಾಶಾನ ಕಾರ್ಮಿಕರ ಮಕ್ಕಳಿಗೆ ಶೇ.10% ರಷ್ಟು, ಬಾಲಕಾರ್ಮಿಕರು/ ಜೀತ ವಿಮುಕ್ತ ಕಾರ್ಮಿಕರ ಮಕ್ಕಳು/ ಗುರುತಿಸಿರುವ ಮಾಜಿ
ದೇವದಾಸಿಯರ ಮಕ್ಕಳಿಗೆ ಶೇ.10% ರಷ್ಟು, 25% ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು/ ಹೆಚ್.ಐ.ವಿ ಗೆ ತುತ್ತಾದ
ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳಿಗೆ ಶೇ.10% ರಷ್ಟು, ಗುರುತಿಸಿರುವ
ಅಲೆಮಾರಿ/ಅಲೆ ಅಲೆಮಾರಿ/ಸೂಕ್ಷ÷್ಣ-ಅತೀ ಸೂಕ್ಷö್ಮ ಸಮುದಾಯದ, ಸೈನಿಕರು ಮತ್ತು ಮಾಜಿ ಸೈನಿಕರು/ ಸರ್ಕಾರಿ ಯೋಜನೆಗಳಿಂದ
ಸ್ಥಾಳಾಂತರಗೊAಡ ಪೋಷಕರ ಮಕ್ಕಳಿಗೆ ಶೇ.10% ರಷ್ಟು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5 ನೇ
ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಶೇ.10% ರಷ್ಟು ಸೇರಿದಂತೆ ಒಟ್ಟು ಶೇ.50 % ರಷ್ಟು ನೇರ ನೇಮಕಾತಿಗೆ ಅವಕಾಶ
ಕಲ್ಪಿಸಲಾಗಿದೆ.
ಈ ವಿಶೇಷ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೇರವಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(KREIS)ವ್ಯಾಪ್ತಿಯ
ವಸತಿ ಶಾಲೆಗಳಿಗೆ ನೇರವಾಗಿ ದಾಖಲಾತಿಯನ್ನು ಮಾಡಿಕೊಳ್ಳವ ಸಂಬAಧ KREIS ವೆಬ್‌ಸೈಟ್:
https://kreis.karnataka.gov.in ಅವಕಾಶವನ್ನು ಕಲ್ಪಿಸಲಾಗಿದ್ದು, ಈ ಅವಕಾಶವನ್ನು
ಸದುಪಯೋಗಪಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.