ವಿಶೇಷ ಶಿಬಿರ ಇಂದು

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಆನ್​ಲೈನ್​ನಲ್ಲಿ ಸಿಇಟಿ ಹಾಗೂ ಕಾಮೆಡ್​&ಕೆ ಸೀಟ್​ ಆಯ್ಕೆ ಪ್ರಕ್ರಿಯೆ ಕುರಿತು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜೂ. 11ರಂದು ಬೆಳಗ್ಗೆ 10.30ಕ್ಕೆ ವಿಶೇಷ ಶಿಬಿರ ಆಯೋಜಿಸಲಾಗಿದೆ.
ಕರ್ನಾಟಕ ಪರೀಾ ಪ್ರಾಧಿಕಾರ ಮತ್ತು ಕಾಮೆಡ್​&ಕೆ ಇತ್ತೀಚೆಗೆ ಅಭ್ಯಥಿರ್ಗಳ ಸಿಇಟಿ ಮತ್ತು ಕಾಮೆಡ್​&ಕೆ ಶ್ರೇಯಾಂಕ ಪ್ರಕಟಿಸಿದೆ. ಹೀಗಾಗಿ ಆನ್​ಲೈನ್​ ಸೀಟು ಆಯ್ಕೆ, ಲಾಗಿನ್​ ಐಡಿ, ಪಾಸ್​ವರ್ಡ್​ ಪಡೆಯುವ ಪ್ರಕ್ರಿಯೆ, ದಾಖಲೆ ಅಪ್​ಲೋಡ್​ ಹಾಗೂ ಇತರ ಸಂಶಯಗಳ ಪರಿಹಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲು ಈ ಕಾರ್ಯಕ್ರಮ ಅನುಕೂಲವಾಗಲಿದೆ. ಸಿಇಟಿ ನಿವೃತ್ತ ನೋಡಲ್​ ಅಧಿಕಾರಿಗಳು, ವಿಷಯ ತರು ಆಕಾಂಗಳಿಗೆ ಸರಿಯಾದ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತರು ಪಾಲ್ಗೊಳ್ಳಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net