

ವಿಜಯವಾಣಿ ಸುದ್ದಿಜಾಲ ಕಡಬ
ವಿದ್ಯಾರ್ಥಿ ಜೀವನ ಎಂಬುವುದು ಪ್ರತಿಯೊಬ್ಬರಿಗೂ ಮಹತ್ವದ ಅವಧಿ. ಈ ಸಂದರ್ಭ ಮನೆಯವರು ತಮ್ಮಮಕ್ಕಳಿಗೆ ಸಂಸ್ಕಾರ ಹಾಗೂ ಜೀವನ ಮೌಲ್ಯದ ಕುರಿತು ತಿಳಿವಳಿಕೆ ನೀಡಬೇಕು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಕಡಬ, ಅಖಿಲ ಕರ್ನಾಟಕ ಜನಜಾಗತಿ ವೇದಿಕೆ ಹಾಗೂ ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಮೂರು ದಿನದ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗತಿ ವೇದಿಕೆ ಟ್ರಸ್ಟ್ ದ.ಕ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಪುತ್ತೂರು ವಕೀಲರ ಸಂ ಅಧ್ಯಕ್ಷ ಜಗನ್ನಾಥ್ ರೈ ಜಿ, ಗಂಗಾಧರ ಗೌಡ ಕುಂಡಡ್ಕ, ತಮ್ಮಯ್ಯ ಗೌಡ, ನೋಣಯ್ಯ ಪೂಜಾರಿ ಅಂಬರ್ಜೆ, ಗಣೇಶ್ ಕೈಕುರೆ, ಶಿವಪ್ರಸಾದ್ ರೈ ಮೈಲೇರಿ, ಮಾಸ್ಟರ್ ಪ್ರಶಾಂತ್, ಭವಾನಿ ಶಂಕರ್ ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಲಂಕಾರು ವಲಯಾಧ್ಯಕ್ಷ ಇಂದು ಶೇಖರ ಶೆಟ್ಟಿ ಮತ್ತು ವಿಪತ್ತು ನಿರ್ವಹಣೆ ಆಲಂಕಾರು ಟಕದ ಕೇಶವ ಅವರನ್ನು ಸನ್ಮಾನಿಸಲಾಯಿತು. ಪೃಥ್ವಿಸಾಗರ್ ಎಂ.ಕೆ, ದೀಕ್ಷಾ ಎಂ.ಎನ್. ಅನಿಸಿಕೆ ವ್ಯಕ್ತಪಡಿಸಿದರು. ಪಾಲಕರ ಪಾದಪೂಜೆ ನೆರವೇರಿತು. ಶೈಕ್ಷಣಿಕ ಸಲಹೆಗಾರ ಗಿರಿಶಂಕರ ಸುಲಾಯ ಮತ್ತು ಮುಖ್ಯಶಿಕ್ಷಕಿ ಆಶಾ ಪಾದಪೂಜೆ ಮಹತ್ವ ತಿಳಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ಅಧ್ಯಕ್ಷ ಮಹೇಶ್ ಕೆ.ಸವಣೂರು ಅಧ್ಯಕ್ಷತೆ ವಹಿಸಿದರು. ಮಮತಾ, ಮೀನಾಕ್ಷಿ, ಬಾಬು ಕೆ.ಎಸ್, ವಾರಿಜಾ, ಮೋಹಿನಿ, ಜಯಶ್ರೀ, ವಿಜಯೇಶ್ ಜೈನ್, ಆನಂದ, ವೀಣಾ, ಸವಿತಾ, ಪ್ರೇಮಾ, ಲಕ್ಷ್ಮೀಶ ಶೆಟ್ಟಿ, ಶಾರದಾ, ಕೇಶವ ಗೌಡ, ಶೀನಪ್ಪ ಗೌಡ ಉಪಸ್ಥಿತರಿದ್ದರು. ಪ್ರಕಾಶ್ ಕುಮಾರ್ ಸ್ವಾಗತಿಸಿದರು. ಸುಜಾತ ವಂದಿಸಿದರು. ರವಿಪ್ರಸಾದ್ ಆಲಾಜೆ ವಂದಿಸಿದರು.