ಅನುದಾನಕ್ಕೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಪತ್ರ

CTD PRESS MEET-LINGAREDDY----
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನಿ ನ ರೇಂದ್ರ ಮೋದಿ,ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ್ ಸೇರಿದಂತೆ ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು,ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕರ್ನಾಟಕದ ಎಲ್ಲ ಸಂಸದರಿಗೆ ಪತ್ರ ಬರೆಯಲಾಗಿದೆ ಎಂದು ಸಮಿತಿ ಕಾರ‌್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಯೋಜನೆಗೆ ಘೋಷಿಸಿರುವಂತೆ 5300 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಲು ಪತ್ರದಲ್ಲಿ ಮನವಿ ಮಾಡಲಾಗಿದೆ. ಕೇಂದ್ರ ಸಚಿವರಾದ ವಿ.ಸೋಮಣ್ಣ,ಶೋಭಾ ಕರಂದ್ಲಾಜೆ,ಎಚ್.ಡಿ.ಕುಮಾರ ಸ್ವಾಮಿ ಹಾಗೂ ಪ್ರಲ್ಹಾದ ಜೋಷಿ ಮತ್ತಿ ತರಿಗೆ ಬರೆದಿರುವ ಪತ್ರದಲ್ಲಿ,ಹಣಕಾಸು ಕೊರತೆಯಿಂದ ಕಾಮಗಾರಿ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ,ಹೆಚ್ಚಾಗಲಿರುವ ವೆಚ್ಚದ ಕುರಿತು ವಿವರಿಸಲಾಗಿದೆ.

ಕೇಂದ್ರ ಅನುದಾನ ಬಿಡುಗಡೆ ಮಾಡಲಿ ಎಂದು ರಾಜ್ಯಸರ್ಕಾರವೂ ಅನುದಾನ ಬಿಡುಗಡೆ ಮಾಡದೆ ಯೋಜನೆ ಕುಂಟುತ್ತಾ ಸಾಗಿದೆ. ಚಿತ್ರ ದುರ್ಗಕ್ಕೆ ಕಳೆದ ಕೆಲ ತಿಂಗಳ ಹಿಂದೆ ಭೇಟಿ ನೀಡಿದ್ದ ಸೋಮಣ್ಣ,ಶೀಘ್ರದಲ್ಲೇ,ಹೊಸದಿಲ್ಲಿಗೆ ಸಮಿತಿ ನಿಯೋಗ ಕರೆಸಿಕೊಂಡು ಸಂಬಂಧಿಸಿದ ವರನ್ನು ಭೇಟಿ ಮಾಡಿಸುವುದಾಗಿ ಹೇಳಿದ್ದರು, ಅವರ ಈ ಮಾತೂ ಈಡೇರಿಲ್ಲ. ಚಿಕ್ಕಬಳ್ಳಾಪುರದಲ್ಲಿ ಬುಧವಾರ ನಡೆದ ವಿಶೇಷ ಸಂಪುಟ ಸಭೆ ಯಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸುವುದಾಗಿ ಸರ್ಕಾರ ಹೇಳಿದೆ, ಆದರೆ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಪ್ರಸ್ತಾಪಿಸಿಲ್ಲ.

ತುಂಗಾ ಮತ್ತು ಭದ್ರಾ ಜಲಾಶಯಗಳಿಂದ 29.90 ಟಿಎಂಸಿ ನೀರು ಬಳಸಿಕೊಂಡು ಚಿಕ್ಕಮಗಳೂರು,ಚಿತ್ರದುರ್ಗ,ದಾವಣಗೆರೆ ಹಾಗೂ ತುಮ ಕೂರು ಜಿಲ್ಲೆಗಳ ಅಂದಾಜು 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಮೈಕ್ರೋ ಇರಿಗೇಷನ್ ಮೂಲಕ ನೀರು ಒದಗಿಸುವ ಹಾಗೂ 367 ಕೆರೆಗಳನ್ನು ತುಂ ಬಿಸುವ ಯೋಜನೆಯನ್ನು ರಾಜ್ಯಸರ್ಕಾರ 21,473 ಕೋಟಿ ರೂ.ಗೆ ಪರಿಷ್ಕರಿಸಿದೆ. 2023-24ನೇ ಕೇಂದ್ರದ ಬಜೆಟ್ 5300 ಕೋಟಿ ರೂ. ಘೋಷಿಸಿದ್ದರೂ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲವೆಂದು ಪತ್ರದಲ್ಲಿ ವಿವರಿಸಲಾಗಿದೆ ಎಂದು ಲಿಂಗಾರೆಡ್ಡಿ ಹೇಳಿದರು.

ಕೆ.ಆರ್.ದಯಾನಂದ್,ಚಿಕ್ಕಪ್ಪನ ಹಳ್ಳಿಷಣ್ಮುಖ,ಹಂಪಯ್ಯನಮಾಳಿಗೆ ಧನಂಜಯ,ಜೆ.ಯಾದವರೆಡ್ಡಿ,ಕರಿಬಸಪ್ಪ,ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.

----------------

ವಿಜಯವಾಣಿ ವರದಿ ಪ್ರಸ್ತಾಪ

ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನ ಹಾಗೂ ಹೊಸದುರ್ಗಕ್ಕೆ ಕುಡಿವ ನೀರು ಪೂರೈಸುವ ಯೋಜನೆಗೆ ಶೀಘ್ರ ಚಾಲನೆ ನೀಡ ಬೇಕೆ ಂದು ಆಗ್ರಹಿಸಿ ಹೋರಾಟ ಮುಂದುವರಿಯಲಿದೆ ಎಂದು ಲಿಂಗಾರೆಡ್ಡಿ ಹೇಳಿದರು. ಚನ್ನಗಿರಿ ಮತ್ತಿತರ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಸ ರ್ಕಾರ 300 ಕೋಟಿ ರೂ.ಘೋಷಿಸಿದೆ. ಈ ಕೆರೆಗಳಿಗೆ ನೀರು ತುಂಬಿಸಿದರೆ ಭದ್ರಾ ನಾಲಾ ಕೊನೆ ಭಾಗದವರೆಗೆ ನೀರು ಹರಿಯಲಿದೆ,ಆದರೆ ಹೊಸದುರ್ಗಕ್ಕೆ 30 ಕ್ಯೂಸೆಕ್ ನೀರು ಕೊಟ್ಟರೆ ಕೊನೆ ಭಾಗಕ್ಕೆ ನೀರು ಹರಿಯುವುದಿಲ್ಲವೆಂಬ ದಾವಣಗೆರೆ ರೈತರು,ಪ್ರತಿನಿಧಿಗಳ ಅವೈಜ್ಞಾನಿಕ ತ ರ್ಕದ ವಿರುದ್ಧ ಅವರು ಹರಿಹಾಯ್ದರು.ಸಮುದ್ರಕ್ಕೆ ಹರಿದು ನೀರು ವ್ಯರ್ಥವಾದರೂ ಪರವಾಗಿಲ್ಲ ಹೊಸದುರ್ಗಕ್ಕೆ ನೀರು ಕೊಡಬಾರದೆನ್ನುವ ದಾವಣಗೆರೆ ಕೆಲವರ ನಿಲುವನ್ನು ಖಂಡಿಸಿ,ಪೂರಕವಾಗಿ ವಿಜಯವಾಣಿ ವರದಿಯನ್ನು ಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದರು.

------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net