ಬಸ್ ನಿಲ್ದಾಣದಲ್ಲಿ ಕನ್ನಡ ರಥಕ್ಕೆ ಚಾಲನೆ

01-GPT-2B
Published on

ಗುಂಡ್ಲುಪೇಟೆ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಸಾರಿಗೆ ಘಟಕದಿಂದ ಹೊರಟ ಕನ್ನಡ ರಥ ಸಾರ್ವಜನಿಕರ ಗಮನ ಸೆಳೆಯಿತು. ಪ್ರತಿ ವರ್ಷವೂ ರಾಜ್ಯೋತ್ಸವದ ಅಂಗವಾಗಿ ಸಾರಿಗೆ ಘಟಕವು ಕನ್ನಡ ಸಾಹಿತಿಗಳು ಮತ್ತು ಪ್ರವಾಸಿ ಸ್ಥಳಗಳ ಭಾವಚಿತ್ರ ಹಾಗೂ ಮಾಹಿತಿ ಒಳಗೊಂಡ ಬಸ್ ಒಂದನ್ನು ಅಲಂಕರಿಸಿ ‘ಕನ್ನಡ ರಥ’ ಎಂದು ನಾಮಕರಣ ಮಾಡಿ ತಿಂಗಳು ಪೂರ್ತಿ ವಿವಿಧೆಡೆ ಸಂಚರಿಸುವಂತೆ ಮಾಡುತ್ತಿರುವುದು ವಿಶೇಷ.
ಬುಧವಾರ ಬೆಳಗ್ಗೆ ಡಿಪೋ ವ್ಯವಸ್ಥಾಪಕಿ ಪುಷ್ಪಾ ಹಾಗೂ ಸಾರಿಗೆ ಅಧಿಕಾರಿಗಳು ಕನ್ನಡ ರಥಕ್ಕೆ ಚಾಲನೆ ನೀಡಿದರು. ಚಾಲಕ ಮಂಜು ಹಾಗೂ ನಿರ್ವಾಹಕ ಪಾಂಡುರಂಗ ಅವರನ್ನು ಒಳಗೊಂಡ ಕನ್ನಡರಥ ಗುಂಡ್ಲುಪೇಟೆ ಚಾಮರಾಜನಗರ ನಡುವೆ ಸಂಚರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net