ಆ್ಯಪ್ ಮೂಲಕ ವಿಧಾನಸಭೆ ಕಲಾಪ ಮಾಹಿತಿ ಸ್ಪೀಕರ್ ಯು.ಟಿ. ಖಾದರ್ ಚಿಂತನೆ

mng-july31-pressclub1 (1)
Published on



ಮಂಗಳೂರು : ವಿಧಾನಸಭೆ ಕಲಾಪವನ್ನು ಡಿಜಿಟಲೀಕರಣಗೊಳಿಸಿ ಪೇಪರ್ ರಹಿತ ಸದನವಾಗಿ ಪರಿವರ್ತನೆ, ಕಲಾಪಗಳ ವಿವರಗಳನ್ನು ಜನಸಾಮಾನ್ಯರಿಗೆ ಆ್ಯಪ್ ಮೂಲಕ ತಲುಪಿಸುವ ವ್ಯವಸ್ಥೆ ಮತ್ತು ವಿಧಾನಸೌಧಕ್ಕೆ ವಿಶೇಷ ಭದ್ರತಾ ವ್ಯವಸ್ಥೆ ಶೀಘ್ರ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಜಿಲ್ಲಾ ಕಾರ್ಯನಿರತ ಸಂಘದ ವತಿಯಿಂದ ನಡೆದ ಮಾಧ್ಯಮ ಸಂವಾದದಲ್ಲಿ
ಮಾತನಾಡಿದ ಅವರು ‘ ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಡಿಜಿಟಲೀಕರಣ ವ್ಯವಸ್ಥೆ ಅನುಷ್ಠಾನ ಗೊಂಡಿದೆ.ಇದರಿಂದ ಸದನದ ಕಲಾಪವನ್ನು ಸಾರ್ವಜನಿಕರು ವೀಕ್ಷಿಸಿ ಸಮಸ್ಯೆ ತಿಳಿಸಲು ಅನುಕೂಲವಾಗಲಿದೆ ಎಂದರು.
* ಭದ್ರತಾ ವ್ಯವಸ್ಥೆ ಬಿಗಿ
ಮುಂದಿನ ಹಂತದಲ್ಲಿ ಜನರಿಗೆ ವಿಧಾನಸಭೆಯ ಕಲಾಪಗಳ ವಿವರಗಳನ್ನು ಆ್ಯಪ್ ಮೂಲಕ ತಲುಪಿಸುವ ಗುರಿ ಇದೆ. ಇದರಿಂದ ತಮ್ಮ ವ್ಯಾಪ್ತಿಯ ಶಾಸಕರು ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ಜನರಿಗೆ ತಿಳಿಯಲಿದೆ. ವಿಧಾನಸಭೆ ಕಲಾಪ ಪೇಪರ್‌ಲೆಸ್ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜರ್ತೆ ಚರ್ಚಿಸಲಾಗಿದೆ. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ವಕೀಲನೊಬ್ಬ ಶಾಸಕರ ಹೆಸರು ಹೇಳಿ ಒಳಗೆ ಪ್ರವೇಶಿಸಿರುವುದು ದೊಡ್ಡ ಭದ್ರತಾ ಲೋಪ. ಹಾಗಾಗಿ ಭದ್ರತಾ ವ್ಯವಸ್ಥೆವನ್ನು ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಒಳಗೆ ಬರಲು ಪಾಸ್ ವ್ಯವಸ್ಥೆಯೊಂದಿಗೆ ಹೊಸ ಕ್ರಮ ಶೀಘ್ರ ಜಾರಿಯಾಗಲಿದೆ ಎಂದು ಅವರು ತಿಳಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಜಗನ್ನಾಥ ಶೆಟ್ಟಿ ಬಾಳ, ಅನ್ನು ಮಂಗಳೂರು ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ವಂದಿಸಿದರು. ಮಹಮ್ಮದ್ ಆರಿಫ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net