ತುಮಕೂರು ಜಿಲ್ಲಾ ಉತ್ಸವದಲ್ಲಿ ಭಾಗಿಯಾಗಿದ್ದ ಸ್ವರಮಾಂತ್ರಿಕ ಎಸ್. ಪಿ.ಬಾಲಸುಬ್ರಹ್ಮಣ್ಯಂ

25Tmk_SPB_tumkur
Published on

ತುಮಕೂರು: ಗಾನಗಾರುಡಿಗ, ಸ್ವರಮಾಂತ್ರಿಕ ಡಾ.ಎಸ್. ಪಿ.ಬಾಲಸುಬ್ರಹ್ಮಣ್ಯಂ ಅವರು 2009ರಲ್ಲಿ ತುಮಕೂರು ಜಿಲ್ಲಾ ಉತ್ಸವದಲ್ಲಿ ಭಾಗವಹಿಸಿ ಗಾಯನ ಕಾರ್ಯಕ್ರಮದ ಮೂಲಕ ಜಿಲ್ಲೆಯ ಜನರನ್ನು ಎರಡು ಗಂಟೆಗೂ ಹೆಚ್ಚು ಕಾಲ ರಂಜಿಸಿದ್ದರು.

2009ರ ಫೆ.17ರಂದು ಜಿಲ್ಲಾ ಉತ್ಸವದಲ್ಲಿ ಗಾನಸುಧೆ ಹರಿಸಿದ ಎಸ್ಪಿಬಿ ಅವರನ್ನು ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಜಿ.ಜನಾರ್ದನರೆಡ್ಡಿ, ಅಂದಿನ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರು ಅಭಿನಂದಿಸಿದ್ದರು. ಆ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡುಶಿವಣ್ಣ, ಬಿ.ಸುರೇಶಗೌಡ, ನಟಿ ತಾರಾ ಮತ್ತಿತರರು ಇದ್ದರು.

ಕುಪ್ಪೂರುಶ್ರೀ ಸಂತಾಪ: ಕುಪ್ಪೂರು ಗದ್ದುಗೆ ಶ್ರೀಗುರು ಮರುಳಸಿದ್ದೇಶ್ವರರ ಭಕ್ತಿ ಗೀತೆಯನ್ನು ಎಸ್.ಪಿ.ಬಾಲಸುಬ್ರಹ್ಮಣ್ಯ ಹಾಡಿದ್ದು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಕುಪ್ಪೂರು ಗದ್ದುಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಒಂದು ಅದ್ಭುತ ಕಂಠ ದಿವಂಗತಾಯಿತು. ಎಸ್. ಪಿ.ಬಾಲಸುಬ್ರಹ್ಮಣ್ಯಂ ಪರ್ವ ಬೆಳ್ಳಿಚುಕ್ಕೆಯಾಯಿತು. ಗಾನತಾರೆಯೊಂದು ತಾರಾಲೋಕ ಸೇರಿತು. ತಾವು ಹಾಡಿದ ಹಾಡುಗಳ ಮೂಲಕ ಎಸ್‌ಪಿಬಿ ಚಿರಂಜೀವಿ. ನಾದಲೋಕದಲ್ಲಿ ಬಾಲಸುಬ್ರಹ್ಮಣ್ಯಂ ಚಿರಾಯು. ಎಸ್‌ಪಿಬಿ ದೇಹ ಇನ್ನಿಲ್ಲ. ಎಸ್‌ಪಿಬಿ ಧ್ವನಿಗೆ ಸಾವಿಲ್ಲ. ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಿರೇಮಠಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net