

ಹುಬ್ಬಳ್ಳಿ: ಇಲ್ಲಿಯ ಈಶ್ವರಿ ಫೌಂಡೇಷನ್ ಸಹಯೋಗದಲ್ಲಿ ಸಂಗೀತ ದಿಗ್ಗಜ ಡಾ. ಎಸ್.ಪಿ. ಬಾಲಸುಬ್ರಮಣ್ಯ ಇವರ ಸ್ಮರಣಾರ್ಥ ಸವಿಗಾನ ಕಾರ್ಯಕ್ರಮವನ್ನು ಅ. 8ರಂದು ಸಂಜೆ 4.30ಕ್ಕೆ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಸಂತೋಷ ವೆರ್ಣೇಕರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂಗೀತ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದಿಪ ಶೆಟ್ಟರ್, ಮಾಜಿ ಮೇಯರ್ ವೀರಣ್ಣ ಸವಡಿ, ರಮೇಶ ಮಹಾದೇವಪ್ಪನವರ, ಗಣೇಶ ಮಳಲಿಕರ, ಸಂತೋಷ ಶೆಟ್ಟಿ, ಇತರರು ಪಾಲ್ಗೊಳ್ಳುವರು ಎಂದರು.
ಹುಬ್ಬಳ್ಳಿ ಧಾರವಾಡದ ಖ್ಯಾತ ಹಾಡುಗಾರರಾದ ಕುಮಾರ್ ಚಂದ್ರಗಿರಿ, ಹರೀಶ ಬೊಮ್ಮನಹಳ್ಳಿ, ವಿಠ್ಠಲ ಪಡಸಲಗಿ, ವಿನಾಯಕ ರೇವಣಕರ, ವಿಜಯಲಕ್ಷ್ಮಿ ಪಾಟೀಲ, ಅರ್ಪಿತಾ ಜಹಗೀರದಾರ, ರಂಜಿತಾ ಪೂಜಾರ, ರಮ್ಯಶ್ರೀ ಕುಲಕಣಿರ್, ಸಂತೋಷ ಮಹಾಲೆ, ಶ್ರೀನಿವಾಸ ಕುಲಕಣಿರ್ ಅವರು ಹಾಡುಗಳನ್ನು ಪ್ರಸ್ತುತಪಡಿಸುವರು.
ಉತ್ತರ ಕರ್ನಾಟಕದ ಉತ್ತಮ ಕಲಾವಿದರಿಗೆ ವೇದಿಕೆ ಕಲ್ಪಿಸಿ ಕಲಾ ಪೋಷಣೆ ಮಾಡುವ ಆಶಯದೊಂದಿಗೆ ಆರ್.ವಿ. ವೈಷಿಷ್ಟ್ಯಂನ ರವಿಂದ್ರ ರಾಮದುರ್ಗಕರ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದರು.