ಸ್ಪರ್ಶ ನರ್ಸಿಂಗ್ ಕಾಲೇಜಿನಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿಜಿ ಅವರ ಜಯಂತಿ ಆಚರಣೆ.

1696336411631
Published on

ಗದಗ ನಗರದ  ವಿದ್ಯಾದಾನ ಸಮಿತಿ ಬಾಲಕರ ಪ್ರೌಢಶಾಲಾ ಆವರಣದಲ್ಲಿರುವ ಸ್ಪರ್ಶ ನರ್ಸಿಂಗ್ ಸೈನ್ಸ್ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯನ್ನು ಆಚರಿಸಲಾಯಿತು.

ಸ್ಪರ್ಶ ಕಾಲೇಜಿನ ಆಡಳಿತಾಧಿಕಾರಿಗಳಾದ ಶ್ರೀ ರಂಗನಾಥ ಎಂ.ವಿ,  ಕ್ಲಾಸಿಕ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ಹಾಗೂ ವಿದ್ಯಾದಾನ ಸಮಿತಿಯ ಆಡಳಿತಾಧಿಕಾರಿಗಳಾದ ಶ್ರೀ ವಾದಿರಾಜ ಕಾತೋಟೆ   ರವರು ಇರ್ವರ ಮಹಾ ನಾಯಕರ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಪೂಜೆ ಸಲ್ಲಿಸಿದರು. 

ನಂತರ ಮುಖ್ಯೋಪಾಧ್ಯಯರಾದ ಶ್ರೀ ಎಂ.ಆರ್. ಡೊಳ್ಳಿನ ರವರು  ಮಾತನಾಡಿ ಮಹಾತ್ಮ ಗಾಂಧೀಜಿ ಅವರು ಭಾರತ ತುಂಬೆಲ್ಲ ಸಂಚರಿಸಿ ಭಾರತೀಯರನ್ನು ಒಗ್ಗೂಡಿಸಿ, ಸರಳ ಹಾಗು ಶಾಂತಿ ಮಾರ್ಗದ ಮೂಲಕ  ಬ್ರಿಟಿಷರ ವಿರುದ್ಧ ಹೋರಾಡಿ   ಸತ್ಯ, ಶಾಂತಿ ಹಾಗೂ ಅಹಿಂಸೆ ಅಸ್ತ್ರಗಳನ್ನು ಬಳಸಿಕೊಂಡು  ಭಾರತಕ್ಕೆ  ಸ್ವಾತಂತ್ರ್ಯ ತಂದು ಕೊಟ್ಟರು, ನಾವೆಲ್ಲರೂ ಇಂತಹ ಮಹಾನ್ ನಾಯಕರು ದೇಶಕ್ಕೆ ಅರ್ಪಿಸಿದ ತ್ಯಾಗ, ಬಲಿದಾನ ತಿಳಿದುಕೊಂಡು, ಇವರ ಆದರ್ಶ ಗುಣಗಳು ಹಾಗೂ ಮೌಲ್ಯಗಳು ಇಂದಿನ ಯುವಕರ ಜೀವನಕ್ಕೆ ಸ್ಪೂರ್ತಿದಾಯಕವಾಗಿವೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ರಂಗನಾಥ ಎಂ.ವಿ. ರವರು ಮಾತನಾಡಿ ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದಿಟ್ಟ ಹೆಜ್ಜೆನಿಟ್ಟು, ಭ್ರಷ್ಟ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ರವರ ಪ್ರಮುಖ ಪಾತ್ರದ ಕುರಿತು ಸಮಗ್ರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿಗಳಾದ  ಯಮನೂರ ಕುಮಾರ ಹಾಗೂ ಜನ್ನತ್ ಬೇಗಂ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸುಮತಿ ಕಿನ್ನಾಳ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಚೈತ್ರಾ ಪೂಜಾರಿ ಸ್ವಾಗತಿಸಿ,  ನಿರೂಪಿಸಿದರು, ಕು. ವೀಣಾ ಲಮಾಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಮಸ್ತ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net