ಪೊನ್ನಂಪೇಟೆಯಲ್ಲಿ ’ಸ್ಪೇಸ್ ಆನ್ ವ್ಹೀಲ್ಸ್’ ಪ್ರದರ್ಶನ

12mdk08
Published on

ಮಡಿಕೇರಿ:
ಕಳೆದ ಹಲವಾರು ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ದೇಶ ಮಾಡಿದ ಸಾಧನೆಗಳನ್ನು ಪ್ರದರ್ಶಿಸಲು ಮತ್ತು ಮಕ್ಕಳಲ್ಲಿ ಬಾಹ್ಯಾಕಾಶದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಲು ಏ.೧೮ ರಂದು ಪೊನ್ನಂಪೇಟೆಯಲ್ಲಿ ಉಡಾವಣಾ ವಾಹನಗಳು, ಉಪಗ್ರಹಗಳು ಇತ್ಯಾದಿಗಳ ಮಾದರಿಗಳನ್ನು ಸಾಗಿಸುವ ’ಸ್ಪೇಸ್ ಆನ್ ವ್ಹೀಲ್ಸ್’ ಪ್ರದರ್ಶನ ನಡೆಯಲಿದೆ.

ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಪ್ರಾಶುಂಪಾಲ ಡಾ. ಎಂ.ಬಸವರಾಜು ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಹಿಣಿ, ಭಾರತೀಯ ಬಾಹ್ಯಾಕಾಶ ಸಂಸ್ಥೆ, ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಯೂನಿವರ್ಸಿಟಿ ಸಹಯೋಗದೊಂದಿಗೆ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಆವರಣದಲ್ಲಿ ಭಾರತೀಯ ಬಾಹ್ಯಾಕಾಶ ಕೇಂದ್ರ ಪ್ರಥಮ ಬಾರಿಗೆ ಕೊಡಗಿನಲ್ಲಿ ’ಸ್ಪೇಸ್ ಆನ್ ವ್ಹೀಲ್ಸ್’ ಪ್ರದರ್ಶನ ನಡೆಸುತ್ತಿದೆ ಎಂದಿದ್ದಾರೆ.

ಅಂದು ಬೆಳಗ್ಗೆ ೧೦.೩೦ ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಇಸ್ರೋ ವಿಜ್ಞಾನಿ ಶ್ರೀನಿವಾಸ್ ಮತ್ತು ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಉದ್ಘಾಟಿಸಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ವೈಜ್ಞಾನಿಕ ಅಭಿವೃದ್ಧಿಯ ಭಾರತದ ದೃಷ್ಟಿಯನ್ನು ಸಾಕಾರಗೊಳಿಸಲು ರಾಕೆಟ್‌ಗಳು, ಉಪಗ್ರಹಗಳು ಮತ್ತು ಅವುಗಳ ಅಪ್ಲಿಕೇಶನ್ ಗಳನ್ನು ನಿಯೋಜಿಸುವಲ್ಲಿ ಇಸ್ರೋದ ಪರಾಕ್ರಮದ ಬಗ್ಗೆ ಮತ್ತು ಮಕ್ಕಳಲ್ಲಿ ಬಾಹ್ಯಾಕಾಶದ ಕುರಿತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.

ಈ ಪ್ರದರ್ಶ ಮೊದಲ ಎರಡು ಉಡಾವಣಾ ಪ್ಯಾಡ್‌ಗಳ ಮಾದರಿಗಳು, ಚಂದ್ರಯಾನ-೧ ಮಿಷನ್, ಇಂಡಿಯನ್ಮಾರ್ಸ್ ಆರ್ಬಿಟರ್ಮಿಷನ್ - ಮಂಗಳಯಾನ, ಭಾರತೀಯ ರಿಮೋಟ್ಸೆನ್ಸಿಂಗ್ ಅಪ್ಲಿಕೇಶನ್‌ಗಳಂತಹ ತಾಂತ್ರಿಕ ಅಪ್ಲಿಕೇಶನ್‌ಗಳು, ಮತ್ತು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್, ಇತರ ಭಾರತೀಯ ಉಪಗ್ರಹ ಸಂವಹನ ಅಪ್ಲಿಕೇಶನ್‌ಗಳ, ಬಾಹ್ಯಾಕಾಶ ಪ್ರಪಂಚದ ಬಗ್ಗೆ ಉತ್ತಮ ಒಳನೋಟವನ್ನು ಒದಗಿಸುವ ಚಂದ್ರನ ಗಗನಯಾತ್ರಿ ಮತ್ತು ಚಂದ್ರಯಾನ-, ಬಾಹ್ಯಾಕಾಶನೌಕೆಯ ಕಲಾತ್ಮಕ ಮಾದರಿಗಳನ್ನು ಹೊಂದಿದೆ. ಇದರೊಂದಿಗೆ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳಾದ ಆದಿತ್ಯಎಲ್-೧, ಚಂದ್ರಯಾನ-೩, ಗಗನ್ ಯಾನ್ ಮಿಷನ್, ವೀನಸ್‌ಆರ್ಬಿಟರ್ಮಿಷನ್ ಮತ್ತು ಎನ್‌ಐಎಆರ್ ಮಿಷನ್‌ನ ಮಾಹಿತಿಯನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಗೋಣಿಕೊಪ್ಪದಿಂದ ಕಾಲೇಜಿನವರೆಗೆ ಉಚಿತವಾಗಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಿಗ್ಗೆ ೧೦ ಗಂಟೆಯಿಂದ ಅರ್ಧತಾಸಿಗೊಂದು ಬಸ್ಸಿನ ವ್ಯವಸ್ಥೆ ಇದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೮೩೧೦೧೯೪೯೨೮, ೮೯೭೧೨೩೧೫೨೦, ೭೮೯೯೮೫೦೨೯೮ ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net