ಇಸ್ರೋ ಸಹಯೋಗದಲ್ಲಿ ಬಾಹ್ಯಾಕಾಶ ಪ್ರದರ್ಶನ

mlp8-1
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯ ಢಪಳಾಪುರ ವಿದ್ಯಾವಿಹಾರ ಸಿಬಿಎಸ್‌ಇ ಶಾಲೆಯಲ್ಲಿ ಇಸ್ರೋ ಸಹಯೋಗದಲ್ಲಿ ಏರ್ಪಡಿಸಿದ್ದ ಸಂಚಾರಿ ಬಾಹ್ಯಾಕಾಶ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಇಸ್ರೋ ಹಿರಿಯ ವಿಜ್ಞಾನಿ ಪಿ.ಎನ್. ಮೂರ್ತಿ, ವಿವೇಕ ಢಪಳಾಪು ಇದ್ದರು.
Published on

ಮಹಾಲಿಂಗಪುರ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಸ್ರೋದ ವಿಜ್ಞಾನಿಯೊಬ್ಬರೊಂದಿಗೆ ಸಂವಾದ, ಬಾಹ್ಯಾಕಾಶದ ಪ್ರಾಯೋಗಿಕ ಜ್ಞಾನ ಪಡೆಯಲು ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿರುವ ಕಾರ್ಯಶ್ಲಾಘನೀಯ ಎಂದು ಜಮಖಂಡಿ ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಹೇಳಿದರು.

ಸಮೀಪದ ರನ್ನಬೆಳಗಲಿಯ ಢಪಳಾಪುರ ವಿದ್ಯಾವಿಹಾರ ಸಿಬಿಎಸ್‌ಇ ಶಾಲೆಯಲ್ಲಿ ಇಸ್ರೋ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಚಾರಿ ಬಾಹ್ಯಾಕಾಶ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಸ್ರೋ ಹಿರಿಯ ವಿಜ್ಞಾನಿ ಪಿ.ಎನ್. ಮೂರ್ತಿ ಅವರಿಂದ ಮಹಾಲಿಂಗಪುರ ಮತ್ತು ಸುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಜ್ಞಾನ ದೊಕಿಸಿಕೊಡಲಾಯಿತು.

ಗ್ರಾಮೀಣ ಮಕ್ಕಳಿಗೆ ಇಸ್ರೋ ವಿಜ್ಞಾನಿಯೊಬ್ಬರೊಡನೆ ಮುಖಾಮುಖಿ ಸಂವಾದ ಮಾಡುವ ಹಾಗೂ ತಮ್ಮ ಕೌತುಕಗಳಿಗೆ ಅವರಿಂದಲೇ ಪರಿಹಾರ ಪಡೆಯುವ ಸೌಭಾಗ್ಯ ಕಲ್ಪಿಸಲಾಗಿತ್ತು.

ಸುತ್ತಲಿನ ಅವರಾದಿ, ಢವಳೇಶ್ವರ, ಬೆಳಗಲಿ, ಮಹಾಲಿಂಗಪುರ, ತೇರದಾಳ, ರಬಕವಿ, ಬನಹಟ್ಟಿ, ಸಂಗಾನಟ್ಟ ಹೀಗೆ 30ಕ್ಕೂ ಅಧಿಕ ಶಾಲಾ ಕಾಲೇಜುಗಳ 6 ರಿಂದ ಪದವಿವರೆಗಿನ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಅದರಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಚಾರಿ ಬಾಹ್ಯಾಕಾಶ ವೀಕ್ಷಣೆೆ ಜತೆಗೆ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಅಪರೂಪದ ಸಮಾಜ ವಿಜ್ಞಾನ ಪ್ರಯೋಗಾಲಯ, ಗಣಿತ ಪ್ರಯೋಗಾಲಯ ವೀಕ್ಷಿಸಿದರು.

ಸಂಸ್ಥೆ ಕಾರ್ಯದರ್ಶಿ ವಿವೇಕ ಢಪಳಾಪುರ, ಪ್ರಾಂಶುಪಾಲ ಲೂಯಿಸ್ ಬರಟೋ ಇದ್ದರು. ವರ್ಷಾ ಪಾಟೀಲ ಪರಿಚಯಿಸಿದರು. ಪ್ರೇಮಾ ಪಾಟೀಲ ನಿರೂಪಿಸಿದರು. ಸುಪ್ರಿತಾ ಹವಾಲ್ದಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net