ಮಹದಾಯಿ ಹೋರಾಟಗಾರರ ಭೇಟಿಯಾದ ಎಸ್ಪಿ

20 NRD-1
: ನರಗುಂದದ ಮಹದಾಯಿ ಹೋರಾಟ ವೇದಿಕೆಗೆ ಎಸ್ಪಿ ಬಿ.ಎಸ್. ನೇಮಗೌಡ, ಡಿವೈಎಸ್ಪಿ ವೈ.ಎಸ್. ಏಗನಗೌಡ್ರ, ಸಿಪಿಐ ಮಲ್ಲಯ್ಯ ಮಠಪತಿ ಗುರುವಾರ ಭೇಟಿ ನೀಡಿ, ಹೋರಾಟಗಾರರೊಂದಿಗೆ ಚರ್ಚಿಸಿದರು.
Published on

ನರಗುಂದ: ಪಟ್ಟಣದ ಮಹದಾಯಿ, ಕಳಸಾ-ಬಂಡೂರಿ ಹೋರಾಟ ವೇದಿಕೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿವೈಎಸ್ಪಿ ವೈ.ಎಸ್. ಏಗನಗೌಡ್ರ, ತಹಸೀಲ್ದಾರ್ ಎ.ಡಿ. ಅಮರಾವದಗಿ, ಸಿಪಿಐ ಮಲ್ಲಯ್ಯ ಮಠಪತಿ ಗುರುವಾರ ಭೇಟಿ ನೀಡಿ ರೈತರ ಬೇಡಿಕೆಗಳ ಕುರಿತು ಚರ್ಚಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಜು.21ರಂದು ನರಗುಂದಕ್ಕೆ ಆಗಮಿಸಿ ರೈತರ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಬೇಕು ಎಂದು ಹೋರಾಟಗಾರರು ಮನವಿ ಮಾಡಿದ್ದರಿಂದ ಬಿ.ಎಸ್. ನೇಮಗೌಡ ಅವರು ಮುಂಜಾಗ್ರತಾ ಕ್ರಮವಾಗಿ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸಿದರು. ಚನ್ನು ನಂದಿ, ವಿಠ್ಠಲ ಜಾಧವ, ಸಿ.ಎಸ್. ಪಾಟೀಲ, ಬಸವರಾಜ ಸಾಬಳೆ, ಫಕೀರಪ್ಪ ಜೋಗಣ್ಣವರ, ಅರ್ಜುನ ಮಾನೆ, ಹನಮಂತ ಸರನಾಯ್ಕರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net