

ಮಸ್ಕಿ: ಮನುಕುಲ ಉಳಿಯಬೇಕಾದರೆ ಪ್ರಕೃತಿ ಮುಖ್ಯ. ಎಲ್ಲರೂ ಪರಿಸರ ಬೆಳೆಸಲು ಗಮನ ಹರಿಸಲಿ ಎಂದು ಎಸ್ಪಿ ಪುಟ್ಟ ಮಾದಯ್ಯ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗುರುವಾರ ಪೊಲೀಸ್ ಇಲಾಖೆ ಮತ್ತು ವನಸಿರಿ ಫೌಂಡೇಷನ್ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯಕರ ಬದುಕಿಗಾಗಿ ಉತ್ತಮ ಪರಿಸರ ಮುಖ್ಯ. ಜಾಗತಿಕವಾಗಿ ತಾಪಮಾನ ಹೆಚ್ಚಿದೆ. ತಾಪಮಾನ ತಣಿಸುವುದಕ್ಕಾಗಿ ಪರಿಸರ ಬೆಳೆಸಬೇಕಾಗಿದೆ. ಗಿಡಮರಗಳು ಹೆಚ್ಚಿದಂತೆಲ್ಲ ಮಳೆ ಬೆಳೆ ಚನ್ನಾಗಿ ಬರಲು ಸಹಾಯಕವಾಗುತ್ತದೆ ಎಂದರು.
ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಸಿಪಿಐ ಬಾಲಚಂದ್ರ ಡಿ.ಲಕ್ಕಂ, ಪಿಎಸ್‌ಐ ಮುದ್ದುರಂಗಸ್ವಾಮಿ, ಮುದಗಲ್ ಪಿಎಸ್‌ಐ ವೆಂಕಟೇಶ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ತಾ.ಪಂ. ಮಾಜಿ ಅಧ್ಯಕ್ಷ ಶಿವಣ್ಣ, ವನಸಿರಿ ಫೌಂಡೇಷನ್ ರಾಜ್ಯ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಸಿದ್ದು ಮುರರಿ, ಗುಂಡಪ್ಪಗೌಡ ಹೂವಿನಬಾವಿ, ಸಿದ್ದನಗವಡ ಕಾಟಗಲ್, ಆದನಗೌಡ, ನಾಗರಾಜ ಗುಡಸಲಿ ಹಾಗೂ ಇತರರು ಇದ್ದರು.