ಅಬ್ಬರದ ಸಂಗೀತಕ್ಕೆ ಕಡಿವಾಣ ಹಾಕಲು ಎಸ್‌ಪಿ ಸಭೆ

sp meet
Published on

ಮಡಿಕೇರಿ:

ಜಿಲ್ಲೆಯಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಡಿಕೆ ಅಬ್ಬರಕ್ಕೆ ಕಡಿವಾಣ ಹಾಕಲು ಪಣತೊಟ್ಟಿರುವ ಕೊಡಗು ಎಸ್‌ಪಿ ಕೆ. ರಾಮರಾಜನ್ ಇದೇ ವಿಷಯಕ್ಕೆ ಸಂಬAಧಿಸಿದAತೆ ಗುರುವಾರ ಇಲ್ಲಿನ ಗೌಡ ಸಮಾಜದ ಸಭಾಂಗಣದಲ್ಲಿ ಗೌರಿ-ಗಣೇಶೋತ್ಸವ ಆಯೋಜಕರ ಸಭೆ ಕರೆದು ಮಾಹಿತಿ ನೀಡಿದರು. ಶಬ್ದ ಮಾಲಿನ್ಯ ಆಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಿದರು. ಗೌರಿ-ಗಣೇಶೋತ್ಸವ ಆಚರಣೆ ವೇಳೆ ಶಬ್ದ ಮಿತಿ ಮೇಲೆ ನಿಗಾ ಇಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿಜೆ ಸೇರಿದಂತೆ ಅಬ್ಬರದ ಸಂಗೀತದಿAದ ಆಗುವ ಅನಾಹುತಗಳ ಬಗ್ಗೆ ಈ ಸಂದರ್ಭ ಪ್ರಾತ್ಯಕ್ಷಿಕೆ ಮೂಲಕ ಆಯೋಜಕರ ಗಮನ ಸೆಳೆಯಲಾಯಿತು. ಡಿಜೆ ಬಳಕೆ ಸಂದರ್ಭ ಹೊರಬೀಳುವ ಶಬ್ದದ ಪ್ರಮಾಣವನ್ನು ಶಬ್ದವನ್ನು ಅಳೆಯುವ ಮಾಪನ ಮೂಲಕ ಮನದ್ಟು ಮಾಡಿಕೊಡಲಾಯಿತು. ಎಷ್ಟು ಶಬ್ದ ಇದ್ದರೆ ಎಷ್ಟು ಡೆಸಿಬಲ್ ಆಗುತ್ತದೆ? ಇದರಿಂದ ಯಾವ ರೀತಿಯ ಸಮಸ್ಯೆಗಳು ಆಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಗೌರಿ-ಗಣೇಶೋತ್ಸವ ಆಯೋಜಕರಿಗೆ ಕೊಡಲಾಯಿತು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀಕಾಂತ್, ಎಎಸ್‌ಪಿ ಬಾರಿಕೆ ದಿನೇಶ್, ಡಿವೈಎಸ್‌ಪಿ ಸೂರಜ್, ವೃತ್ತ ನಿರೀಕ್ಷಕ ರಾಜು ಮತ್ತಿತರರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net