ಸಚಿವೆ ಹೆಬ್ಬಾಳ್ಕರ್ ಕಾರು ಅಪಘಾತ :ಹಿಟ್ ಆ್ಯಂಡ್ ರನ್ ಪ್ರಕರಣ: ಎಸ್‌ಪಿ

1200-675-19554950-thumbnail-16x9-ck.jpg
Published on

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರು ಅಪಘಾತ ಪ್ರಕರಣ ಹಿಟ್ ಆ್ಯಂಡ್ ರನ್ ಕೇಸ್ ಆಗಿದ್ದು, ಅಪಘಾತಪಡಿಸಿ ಟ್ರಕ್ ನಿಲ್ಲಿಸದೇ ಚಾಲಕ ಹೋಗಿದ್ದಾನೆ. ಕಂಟೇನರ್ ಟ್ರಕ್ ಪತ್ತೆ ನಡೆದಿದ್ದು, ಆದರೆ ಇದೇನೂ ಪೂರ್ವನಿಯೋಜಿತ ಅಲ್ಲ ಎಂದ ಎಸ್‌ಪಿ ಭೀಮಾಶಂಕರ ಗುಳೇದ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕ ಶಿವಪ್ರಸಾದ ದೂರು ನೀಡಿದ್ದಾರೆ. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಕಾರಿನ ಮುಂಭಾಗದಲ್ಲಿದ್ದ ಕಂಟೇನರ್ ಟ್ರಕ್ ಎಡ ಬದಿಗೆ ಬಂದಿದೆ. ಕಾರಿಗೆ ಟ್ರಕ್ ತಾಗಿದ್ದು, ಅಪಘಾತ ತಪ್ಪಿಸಲು ಎಡಕ್ಕೆ ತೆಗೆದುಕೊಂಡಿದ್ದಾರೆ. ಸರ್ವೀಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಕಂಟೇನರ್ ಟ್ರಕ್ ಪತ್ತೆಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾಯಿ ಅಡ್ಡ ಬಂದಿದ್ದಕ್ಕೆ ಟ್ರಕ್ ಎಡಕ್ಕೆ ಬದಿಗೆ ಬಂದಿದೆ. ಸಚಿವರ ಬೆಂಗಾವಲು ವಾಹನ ಇರಲಿಲ್ಲ. ಅಪಘಾತ ಬಳಿಕ ಕಂಟೇನರ್ ಟ್ರಕ್ ಚಾಲಕ ನಿಲ್ಲದೆ, ಸಹಾಯ ಮಾಡದೇ ಹೋಗಿದ್ದಾನೆ. ಪೊಲೀಸರು ಬರುವ ಮುನ್ನ ಸ್ಥಳ ಮಹಜರು ಮುನ್ನವೇ ಕಾರು ತೆಗೆದುಕೊಂಡು ಹೋಗಿದ್ದರ ಬಗ್ಗೆ ತನಿಖೆ ಮಾಡುತ್ತೇವೆ. ಪೊಲೀಸರು ಸ್ಥಳ ಪರಿಶೀಲನೆ ಬಳಿಕ ವಾಸ್ತವಂಶ ಗೊತ್ತಾಗಿದೆ ಎಂದರು.

ಮೊದಲು ಗನ್ ಮ್ಯಾನ್ ಈರಪ್ಪ ದೂರು ಕೊಟ್ಟ ನಂತರ ಅದರಲ್ಲಿ ನಿಖರವಾದ ಮಾಹಿತಿ ಇರಲಿಲ್ಲ. ಬಳಿಕ ಚಾಲಕ ಶಿವಪ್ರಸಾದ್ ನಿಖರ ಮಾಹಿತಿ ನೀಡಿದ್ದಾರೆ. ಎಲ್ಲ ಆಯಾಮದಿಂದ ತನಿಖೆ ಮಾಡುತ್ತೇವೆ. ಇದು ಪೂರ್ವ ನಿಯೋಜಿತ ಅಲ್ಲವೇ ಅಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net