ಪ್ರೊಮೊ ರನ್‌ಗೆ ಹಸಿರು ನಿಶಾನೆ ತೋರಿದ ಎಸ್ಪಿ

SP gives green signal for promo run
ವಿಜಯಪುರದಲ್ಲಿ ನಡೆಯಲಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್-2024 ರ ಹಿನ್ನೆಲೆ ಹಮ್ಮಿಕೋಂಡಿದ್ದ ಪ್ರೊಮೊ ರನ್‌ಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಚಾಲನೆ ನೀಡಿದರು. ಡಾ. ಮಹಾಂತೇಶ ಬಿರಾದಾರ, ಡಾ. ರವಿ ಚೌಧರಿ, ಸಂಕೇತ ಬಗಲಿ ಮತ್ತಿತರರಿದ್ದಾರೆ.
Published on

ವಿಜಯಪುರ: ವೃಕ್ಷೋತ್ಥಾನ್ ಹೆರಿಟೇಜ್ ರನ್ ಅಂಗವಾಗಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ 10 ಕಿಮೀ ಪ್ರೊಮೊ ರನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಡಾ. ಬಿ.ಆರ್. ಆಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ ಓಟವು ಅಂಬೇಡ್ಕರ್ ಚೌಕ್, ಗಾಂಧಿ ಚೌಕ್ ಮತ್ತು ಶಿವಾಜಿ ಚೌಕ್, ಜೋರಾಪುರ ಪೇಟೆ, ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಮೂಲಕ ಇಬ್ರಾಹಿಂ ರೋಜಾ ಸೇರಿತು. ಹೆರಿಟೇಜ್ ರನ್, ಹಸಿರು ವಿಜಯಪುರ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪರ ಘೋಷಣೆ ಮೊಳಗಿಸಿದರು. ಇಬ್ರಾಹಿಂ ರೋಜಾದಿಂದ ಪುನಃ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ತಲುಪಿತು.

ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಜಿಲ್ಲೆಯಲ್ಲಿ ಹೆರಿಟೇಜ್ ರನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 21 ಕಿಮೀ. ಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ಪ್ರೊಮೊ ರನ್ ಓಟದಲ್ಲಿ ಡಾ. ಮಹಾಂತೇಶ ಬಿರಾದಾರ, ಡಾ. ರವಿ ಚೌಧರಿ, ಡಾ. ಭೀಮನಗೌಡ ಬಿರಾದಾರ, ಸಂಕೇತ ಬಗಲಿ, ವೀರೇಂದ್ರ ಗುಚ್ಚೆಟ್ಟಿ, ಶಿವನಗೌಡ ಪಾಟೀಲ, ಸೋಮಶೇಖರ ಸ್ವಾಮಿ, ಅನೀಲ ಧಾರವಾಡಕರ, ಅಮಿತ ಬಿರಾದಾರ, ಶ್ರೀಕಾಂತ ಮಂತ್ರಿ, ಡಾ. ಪ್ರವೀಣ ಚೌರ, ಗುರುಶಾಂತ ಕಾಪಸೆ, ಸೋಮು ಮಠ, ಪಾಲಿಕೆ ಸದಸ್ಯ ಅಶ್ಪಾಕ್ ಮನಗೂಳಿ, ಮುತ್ತಣ್ಣ ಬಿರಾದಾರ, ವಿಜಯಕುಮಾರ ಕೋರೆ, ಗಜಾನನ ಮಂದಾಲಿ ಮತ್ತಿತರರಿದ್ದರು.

ಅಲ್ಲದೆ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರು, ಸೈಕ್ಲಿಂಗ್ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ಸೈಕ್ಲಿಂಗ್ ನಡೆಸಿದರೆ, ಇಂಡಿಯನ್ ಆರ್ಮಿ ಸಂಘಟನೆ, ಕಮಾಂಡೊ ಸಂಘಟನೆಯ ಓಟಗಾರರೂ ಪಾಲ್ಗೊಂಡರು.

ವೃಕ್ಷೋತ್ಥಾನ್ ಹೆರಿಟೇಜ್ ರನ್-2024 ಡಿ. 22 ರಂದು ನಗರದಲ್ಲಿ ನಡೆಯಲಿದ್ದು, ಸದ್ಯ ನೋಂದಣಿ ಭರದಿಂದ ಸಾಗಿದೆ. ನ. 30 ನೋಂದಣಿ ಮಾಡಿಸಲು ಕೊನೆಯ ದಿನವಾಗಿದೆ. ಆಸಕ್ತರು ಕೂಡಲೇ ನೋಂದಣಿ ಮಾಡಿಸಬೇಕು ಎಂದು ಕೋರ್ ಕಮಿಟಿ ಮುರುಗೇಶ ಪಟ್ಟಣಶೆಟ್ಟಿ ಮತ್ತು ಡಾ. ರಾಜು ಯಲಗೊಂಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net