ಶಾಂತಿ ಭಂಗಕ್ಕೆ ಯತ್ನಿಸಿದರೆ ಕ್ರಮದ ಎಚ್ಚರಿಕೆ

SP
Published on

ಮಡಿಕೇರಿ:

ಕಟ್ಟೆಮಾಡು ದೇವಾಲಯ ವಿವಾದ ಮುಂದಿರಿಸಿಕೊAಡು ಸಮಾಜದಲ್ಲಿ ಶಾಂತಿ ಭಂಗಕ್ಕೆ ಮುಂದಾಗುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಟ್ಟೆಮಾಡು ದೇವಾಲಯ ಅರ್ಚಕರ ಮೇಲಿನ ಹಲ್ಲೆಕೋರರನ್ನು ಬಂಧಿಸಲು ಪೊಲೀಸರ ತಂಡ ರಚಿಸಲಾಗಿದೆ.

ಕೊಡಗಿನಲ್ಲಿ ಎರಡು ಸಮುದಾಯಗಳ ನಡುವಿನ ಭಿನ್ನಮತ ಪರಿಹಾರಕ್ಕೆ ಜಿಲ್ಲಾಡಳಿತದಿಂದ ಸತತ ಪ್ರಯತ್ನ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ಟೀಕೆ ಮಾಡುವುದರ ಬಗ್ಗೆ ಪೊಲೀಸ್ ಇಲಾಖೆಯಿಂದ ತೀವ್ರ ನಿಗಾ ವಹಿಸಲಾಗಿದೆ. ಕಟ್ಟೆಮಾಡು ದೇವಾಲಯದ ವಿವಾದ ಬಳಸಿ ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುವವರು, ಇದಕ್ಕೆ ಪ್ರೇರೇಪಿಸುವವರ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗುತ್ತದೆ. ಅರ್ಚಕರ ಮೇಲಿನ ಹಲ್ಲೆ ಆರೋಪಿಯ ವಿರುದ್ಧ ಕೊಲೆ ಯತ್ನದ ಆರೋಪದ ಸೆಕ್ಷನ್ ವಿಧಿಸಲಾಗಿದೆ. ಹಲ್ಲೆ ಹಿನ್ನೆಲೆಯಲ್ಲಿ ದೇವಾಲಯದ ವಿವಾದ ಇದೆಯೇ ಅಥವಾ ವೈಯಕ್ತಿಕ ವಿಚಾರಗಳಿದೆಯೇ ಎಂಬ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿಯಲಿದೆ. ಹಲ್ಲೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರ 3 ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಬಿರುಸಿನ ತನಿಖೆ ನಡೆಯುತ್ತಿದೆ.

ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸುವುದು ಎಲ್ಲರಿಗೂ ಇರುವ ಹಕ್ಕಾಗಿದೆ. ಯಾವುದೇ ಜನಾಂಗದ ಪ್ರತಿಭಟನೆಯನ್ನು ಪೊಲೀಸ್ ಇಲಾಖೆಯಿಂದ ತಡೆಗಟ್ಟುವ ಚಿಂತನೆಯಿಲ್ಲ. ಎಷ್ಟೇ ಜನ ಬರಲಿ, ಶಾಂತಿ ಕಾಪಾಡಿಕೊಂಡು ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net