

ಶಿಗ್ಗಾಂವಿ: ಸೋಯಾಬೀನ್ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದಘಟನೆ ತಾಲೂಕಿನ ಗಂಜೀಗಟ್ಟಿ ಗ್ರಾಮದ ಗುರುವಾರ ನಡೆದಿದೆ.
ಈರಪ್ಪ ಸಾವಳಗಿ ಎಂಬುವವರ 5 ಎಕರೆ ಜಮೀನಿನಲ್ಲಿ ಬೆಳೆದ ಸೋಯಾಬೀನ್ ಬೆಳೆ ನಾಲ್ಕು ದಿನಗಳ ಹಿಂದೆ ಕಟಾವು ಮಾಡಿ ಬಣವೆ ಹಾಕಲಾಗಿತ್ತು.ಗುರುವಾರ ಮಧ್ಯಾಹ್ನ ಆಕಸ್ಮಿಕವಾಗಿ ಬಣವೆಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.
ಶಿಗ್ಗಾಂವಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಘಟನೆ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.