ಮೋಘಾ(ಬಿ) ಗ್ರಾಮದಲ್ಲಿ ಸೋಯಾಬೀನ್ ಬಣವಿಗೆ ಬೆಂಕಿ

PH 03
Published on

ಮಾದನಹಿಪ್ಪರಗಿ: ಮೋಘಾ (ಬಿ) ಗ್ರಾಮದಲ್ಲಿ ಸೋಯಾಬೀನ್ ಬಣವಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶುಕ್ರವಾರ ರಾತ್ರಿ ಜರುಗಿದೆ.

ಇಮಾಮಸಾಬ್ ಹೈದರ್ ಎಂಬುವವರಿಗೆ ಸೇರಿದ ಬೆಂಕಿಗಾಹುತಿಯಾಗಿದೆ. ಇಮಾಮ್‌ಸಾಬ್ ಅವರು 7 ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆದಿದ್ದರು. ಇತ್ತೀಚೆಗಷ್ಟೆ ಕಟಾವು ಮಾಡಿ ರಾಶಿ ಮಾಡಲು ಬಣವಿ ಹಾಕಿದ್ದರು. ಶುಕ್ರವಾರ ರಾತ್ರಿ ಬಣವಿಗೆ ಬೆಂಕಿ ತಗುಲಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರು ಬರುವಷ್ಟರೊಳಗೆ ಬಣವಿ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಮುಂದೇನು ಮಾಡಬೇಕು ಎಂಬುದು ತೋಚದಂತಾಗಿದೆ.

ಕೂಡಲೇ ಸರ್ಕಾರ ರೈತನ ನೆರವಿಗೆ ಧಾವಿಸಿ, ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಮಾದನಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net