ಸೋಯಾಬೀನ್ ಬಣವೆಗೆ ಬೆಂಕಿ

Fire on Soyabeen crop
Published on

ಧಾರವಾಡ: ಕಟಾವು ಮಾಡಿ ಜಮೀನಿನಲ್ಲಿ ಇಡಲಾಗಿದ್ದ ಸೋಯಾಬೀನ್ ಬಣವೆಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ಚರಂತಿಮಠ ಗಾರ್ಡನ್ ಹತ್ತಿರದ ಜಮೀನಿನಲ್ಲಿದ್ದ ರಾಚಯ್ಯ ಫಕೀರಯ್ಯ ಬಾಲೇದಮಠ ಎಂಬುವವರ ಬಣವೆ ಸುಟ್ಟಿದೆ. ಯಾರೂ ಇಲ್ಲದ ವೇಳೆ ಬೆಂಕಿ ಹೊತ್ತಿಕೊಂಡಿದೆ. ಅದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net