ಮುದಗಲ್: ಮುಂಗಾರು ಮಳೆ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸುರಿದಿದ್ದರಿಂದ ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು ಭರ್ತಿಯಾದವು. ಬುಧವಾರ ಬೆಳಗ್ಗೆಯಿಂದ ಗುಡುಗು ಮಿಶ್ರಿತ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತ ವಾಯಿತು.
ನಿರಂತರ ಮಳೆಯಿಂದ ಕೂಲಿಕಾರರು ಪರದಾಡಿದರು. ಪಾಲಕರು ಮಕ್ಕಳನ್ನು ಶಾಲೆಗೆ ಕರೆತರಲು ಹರಸಾಹಸ ಪಡಬೇಕಾಯಿತು. ರೈತರು ಬಿತ್ತನೆ ಮಾಡಲು ಸಿದ್ಧಗೊಳಿಸಿದ್ದ ಹೊಲಗಳಿಗೆ ಮತ್ತೆ ವರುಣನ ಸಿಂಚನದಿಂದ ಬಿತ್ತನೆ ಕಾರ್ಯ ಸ್ಥಗಿತಗೊಳಿಸಲಾಯಿತು.