

ಖಾನಾಪುರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ಕಷಿ ಇಲಾಖೆಯಿಂದ ರೆತರಿಗೆ ಸರ್ಕಾರದ ಸಹಾಯಧನದಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಿಸಲಾಗುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೆತರು ಗುಣಮಟ್ಟದ ಬಿತ್ತನೆ ಬೀಜ ಪಡೆದು ಕೃಷಿ ಅಧಿಕಾರಿಗಳ ಮಾರ್ಗದರ್ಶನದಂತೆ ಭೂಮಿಯ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ರೆತರಿಗೆ ಬೇಕಾಗುವಷ್ಟು ಭತ್ತ ಹಾಗೂ ಗೋವಿನಜೋಳ ಬೀಜಗಳ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು. ತಾಲೂಕು ಸಹಾಯಕ ಕಷಿ ನಿರ್ದೇಶಕ ಸತೀಶ ಮಾವಿನಕೊಪ್ಪ ಮಾತನಾಡಿ, ತಾಲೂಕಿನಲ್ಲಿ 4 ಬಿತ್ತನೆ ಬೀಜ ವಿತರಣಾ ಕೇಂದ್ರಗಳ ಮೂಲಕ ಪಿಕೆಪಿಎಸ್ಗಳಲ್ಲಿ ಭತ್ತ ಹಾಗೂ ಗೋವಿನಜೋಳ ವಿತರಿಸಲಾಗುತ್ತದೆ. ರೈತರು ಯೂರಿಯಾ, ಡಿಎಪಿ ಹಾಗೂ ಇತರ ಸಂಯುಕ್ತ ರಸಗೊಬ್ಬರಗಳ ಬಳಕೆ ಮಾಡಬೇಕು ಎಂದರು. ಕಷಿ ಇಲಾಖೆ ಅ-ಧಿಕಾರಿಗಳು ಮತ್ತು ರೆತರು ಇದ್ದರು.