

ಹುಕ್ಕೇರಿ: ಮುಂಗಾರು ಹಂಗಾಮಿನಲ್ಲಿ ರೈತರು ತೇವಾಂಶ ಸೇರಿ ಪೂರಕ ವಾತಾವರಣ ಗಮನಿಸಿ ಬಿತ್ತನೆ ಮಾಡಬೇಕು. ಸೊಯಾಬೀನ್ ಸೇರಿ ಬಿತ್ತನೆ ಬೀಜಗಳ ಅಗತ್ಯ ದಾಸ್ತಾನು ಇದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಪ್ರಸಕ್ತ ವರ್ಷ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ, ಮುಂಗಾರು ಬಿತ್ತನೆ ಬೇಗ ಆಗುತ್ತಿದೆ. ರೈತರಿಗೆ ಬೇಕಾದ ಎಲ್ಲ ಬೀಜ, ಬಿತ್ತನೆ ಕ್ರಮ ಹಾಗೂ ಕೀಟಗಳ ಬಾಧೆ ತಡೆ ಸೇರಿ ಅಗತ್ಯ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಮಾತನಾಡಿ, ತಾಲೂಕಿನ 3 ರೈತ ಸಂಪರ್ಕ ಕೇಂದ್ರ ಹಾಗೂ 37 ಪಿಕೆಪಿಎಸ್‌ಗಳಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಬೀಜ, ರಸಗೊಬ್ಬರ ಖರೀದಿಸಿದವರಿಗೆ ಮಾರಟಗಾರರು ಕಡ್ಡಾಯವಾಗಿ ರಸೀದಿ ನೀಡಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಸತ್ತೆಪ್ಪ ನಾಯಿಕ, ರಾಚಯ್ಯ ಹಿರೇಮಠ, ಕಲಗೌಡ ಪಾಟೀಲ, ಮಹಾವೀರ ನಿಲಜಗಿ, ಆರ್.ಕೆ.ಪಾಟೀಲ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಚನ್ನಪ್ಪ ಗಜಬರ, ಎಚ್.ಎಲ್.ಪೂಜೇರಿ, ಬಿ.ಕೆ.ಮಗೆನ್ನವರ, ಶಿವನಗೌಡ ಪಾಟೀಲ, ಆನಂದ ಲಕ್ಕುಂಡಿ, ಪ್ರಭು ವಂಟಮೂರೆ, ಆರ್.ಬಿ.ಪಾಟೀಲ, ಪುರುಷೋತ್ತಮ ಪೀರಾಜೆ, ಶಿವಾನಂದ ಕಮತ, ಉದಯ ಅಗನೂರ, ಸಮೀರ್ ಲೋಕಾಪುರೆ ಇತರರಿದ್ದರು.