

ಹುಬ್ಬಳ್ಳಿ: ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಮೇನ್‌ನ ಸದಸ್ಯರು ಇತ್ತೀಚೆಗೆ ಸಮೀಪದ ತಡಸ ಗ್ರಾಮದ ತಾಯವ್ವನ ಗುಡಿಯ ಅರಣ್ಯ ಭಾಗದಲ್ಲಿ ಬೀಜ ಬಿತ್ತನೆ ಕಾರ್ಯಕ್ರಮವನ್ನು ನೆರವೇರಿಸಿದರು.
ಹಲಸಿನ ಬೀಜ, ಗೋಡಂಬಿ ಬೀಜ, ಮಾವಿನ ತಳಿಯ ಬೀಜ, ಪೇರಲ ಹಣ್ಣಿನ ಬೀಜ, ಗೋವಿನ ಜೋಳ, ಮುಸುಕಿನ ಜೋಳ, ಮೇವಿನ ಜೋಳದ ಬೀಜಗಳನ್ನು ಬಿತ್ತನೆ ಮಾಡಲಾಯಿತು.
ಹುಬ್ಬಳ್ಳಿ ಮೇನ್ ಅಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ್, ಉಪಾಧ್ಯಕ್ಷ ಪಾಂಡುರಂಗ ತಾಳೇಬೈಲಕರ, ಜ್ಯೋತಿ ವೆಂಕಟೇಶ, ವೀರೇಶ ಚಿಕ್ಕಮಠ, ಕೆ. ವಿಜಯಕುಮಾರ, ಸುರೇಶ ಮಂಜಪ್ಪ, ಹನುಮಂತಪ್ಪ ವಿ. ಶಿವನಗೌಡರ ಇತರರಿದ್ದರು.