ಅರಣ್ಯದಲ್ಲಿ ಬೀಜ ಬಿತ್ತನೆ ಶ್ಲಾಘನೀಯ: ಆರ್‌ಎಫ್‌ಒ ರಾಘವೇಂದ್ರ ಎಚ್.ಪಿ.

Kadaba
ಪೇರಡ್ಕದ ಸಾಂತೋಮ್ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಪೌಲ್‌ಜೇಕಬ್ ಉದ್ಘಾಟಿಸಿದರು.
Published on

ಕಡಬ: ಅರಣ್ಯ ಇಲಾಖೆ ವತಿಯಿಂದ ಕಾಡುಪ್ರಾಣಿಗಳು ಆಹಾರವಾಗಿ ತಿನ್ನಲು ವಿವಿಧ ರೀತಿಯ ಹಣ್ಣು ಹಂಪಲುಗಳ ಗಿಡಗಳನ್ನು ನಾಟಿ ಮಾಡುವ ಕಾರ್ಯಕ್ರಮ ಈಗಾಗಲೇ ಜಾರಿಯಲ್ಲಿದೆ. ಅದರ ಜತೆಗೆ ಆನೆಗಳು ಇಷ್ಟಪಟ್ಟು ತಿನ್ನುವ ಕಲ್ಲು ಬಾಳೆಗಿಡಗಳನ್ನು ಬೆಳೆಸುವ ಸಲುವಾಗಿ ಅರಣ್ಯದಲ್ಲಿ ಬೀಜ ಬಿತ್ತುವ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ. ಹೇಳಿದರು.

ಲಯನ್ಸ್ ಕ್ಲಬ್ ಕಡಬ, ಅರಣ್ಯ ಇಲಾಖೆ ಸುಬ್ರಹ್ಮಣ್ಯ ವಲಯ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ರೋಟರಿ ಕ್ಲಬ್ ಕಡಬ, ಜೆಸಿಐ ಕಡಬ ಕದಂಬ ಹಾಗೂ ಬಿಳಿನೆಲೆ ಯುವಕ ಮಂಡಲ ಸಂಯುಕ್ತ ಆಶ್ರಯದಲ್ಲಿ ‘ಆನೆಗಳ ಉಳಿಸೋಣ ಬನ್ನಿ’ ಕಾರ್ಯಕ್ರಮದಡಿ ಮೀನಾಡಿ ಬಳಿಯ ಓತಿಮಾರ್ ಅರಣ್ಯ ಪ್ರದೇಶದಲ್ಲಿ ಕಲ್ಲುಬಾಳೆಯ ಬೀಜಗಳ ಬಿತ್ತನೆ ಕಾರ್ಯಕ್ರಮ ಉದ್ಘಾಟನೆಯನ್ನು ಪೇರಡ್ಕದ ಸಾಂತೋಮ್ ವಿದ್ಯಾನಿಕೇತನ ಶಾಲೆಯಲ್ಲಿ ನೆರವೇರಿಸಿ ಮಾತನಾಡಿದರು.

ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ಗೋಪಾಲಕೃಷ್ಣ ಎ.ಎಸ್. ಅಧ್ಯಕ್ಷತೆ ವಹಿಸಿದ್ದರು. ಪೇರಡ್ಕದ ಸಾಂತೋಮ್ ವಿದ್ಯಾನಿಕೇತನ ಶಾಲೆ ಸಂಚಾಲಕ ಪೌಲ್‌ಜೇಕಬ್, ಕಡಬ ಸೀನಿಯರ್ ಚೇಂಬರ್ ಅಧ್ಯಕ್ಷ ವಿಲ್ಸನ್ ಹಾಗೂ ಜೆಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ಸಾಂತೋಮ್ ವಿದ್ಯಾನಿಕೇತನ ಶಾಲೆ ಮುಖ್ಯಶಿಕ್ಷಕಿ ಜ್ಯೋತಿ, ಉಪ ವಲಯ ಅರಣ್ಯಾಧಿಕಾರಿಗಳಾದ ಯೋಗೀಶ್, ಅಪೂರ್ವ, ಸಿಬ್ಬಂದಿ ಪ್ರಕಾಶ್, ಅಚ್ಯುತ. ಪೇರಡ್ಕದ ಸಾಂತೋಮ್ ವಿದ್ಯಾನಿಕೇತನ ಶಾಲೆ ಸಂಚಾಲಕ ಪೌಲ್‌ಜೇಕಬ್ ಉಪಸ್ಥಿತರಿದ್ದರು.

ಕಡಬ ರೋಟರಿ ಕ್ಲಬ್‌ನ ಕಾರ್ಯದರ್ಶಿ ಗೋವಿಂದ ನಾಯ್ಕ ಸ್ವಾಗತಿಸಿ, ಕಡಬ ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಸಿದ್ಧಲಿಂಗ ವಂದಿಸಿ, ಶಿಕ್ಷಕಿ ಪ್ರಭಾವತಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net