

ಮಂಜುನಾಥ ಅಂಗಡಿ ಧಾರವಾಡ
ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆಯೋಜಿಸುವ ಕೃಷಿ ಮೇಳ ಅಕ್ಷರಶಃ ರೈತರ ಜಾತ್ರೆ. ಕೃಷಿಗೆ ಅಗತ್ಯ ಸಲಕರಣೆಗಳನ್ನು ರೈತರು ಒಂದೇ ಕಡೆ ಖರೀದಿಸಲು ಅನುಕೂಲವಾಗುತ್ತದೆ. ಜೊತೆಗೆ ಕೃಷಿ ವಿಶ್ವವಿದ್ಯಾಲಯದಿಂದ ಮಾರಾಟವಾಗುವ ಬಿತ್ತನೆ ಬೀಜಗಳು ಪ್ರಮಾಣೀಕೃತ ಮತ್ತು ಗುಣಮಟ್ಟಕ್ಕೆ ಹೆಸರುವಾಸಿ.
ಕೃಷಿ ವಿಶ್ವವಿದ್ಯಾಲಯವು ರೈತ ಸಮುದಾಯಕ್ಕೆ ಉತ್ತಮ ಗುಣಮಟ್ಟದ ಪ್ರಮಾಣೀಕೃತ ಮತ್ತು ನಿಜ ಬೀಜವನ್ನು ಪೂರೈಸಲು ಶ್ರಮಿಸುತ್ತಿದೆ. ಪ್ರಸಕ್ತ ವರ್ಷ ವಿವಿಧ ಬೆಳೆಗಳ ಹಾಗೂ ತಳಿಗಳಲ್ಲಿ ಬೀಜೋತ್ಪಾದನೆ ಮಾಡಿದ್ದು, ಹಿಂಗಾರು ಹಂಗಾಮಿನ ಬೀಜಗಳನ್ನು ಮಾರಾಟಕ್ಕಿಡಲಾಗಿದೆ. ಬೀಜ ಘಟಕದಲ್ಲಿ ೪೦೪ ಕ್ವಿಂ. ಹಿಂಗಾರು ಜೋಳ, ೬೩೮ ಕ್ವಿಂ. ಗೋಽ, ೨,೧೫೩ ಕ್ವಿಂ. ಕಡಲೆ, ೭೯ ಕ್ವಿಂ. ಕುಸುಬೆ ಸೇರಿ ೩,೨೭೩ ಕ್ವಿಂ. ಬೀಜಗಳನ್ನು ಮಾರಾಟಕ್ಕೆ ಇಡಲಾಗಿದೆ.
೨ನೇ ದಿನದ ಕೃಷಿ ಮೇಳಕ್ಕೆ ಬಂದಿದ್ದ ವಿವಿಧ ಜಿಲ್ಲೆಗಳ ರೈತರು ಬೀಜ ಘಟಕದಿಂದ ಸುಮಾರು ೨೦೭ ಕ್ವಿಂಟಲ್ ಹಿಂಗಾರು ಬೆಳೆಗಳ ಬಿತ್ತನೆ ಬೀಜಗಳನ್ನು ಖರೀದಿಸಿದರು. ಭಾನುವಾರವಾಗಿದ್ದರಿಂದ ರೈತರ ಸಂಖ್ಯೆ ಹೆಚ್ಚಾಗಿತ್ತು. ಸುಮಾರು ೩.೦೫ಲಕ್ಷ ರೈತರು, ವಿಸ್ತರಣಾ ಕಾರ್ಯಕರ್ತರು ಹಾಗೂ ಇಲಾಖೆಯ ಅಽಕಾರಿಗಳು ಪಾಲ್ಗೊಂಡಿದ್ದರು.
ನಾನು ನಿವೃತ್ತ ಶಿಕ್ಷಕ. ಸದ್ಯ ಕೃಷಿ ಮಾಡುತ್ತಿದ್ದೇನೆ. ಧಾರವಾಡ ಕೃಷಿ ಮೇಳದಲ್ಲಿ ಸಿಗುವ ಬಿತ್ತನೆ ಬೀಜದ ಗುಣಮಟ್ಟದ ಬಗ್ಗೆ ಕೇಳಿದ್ದೇನೆ. ಹೀಗಾಗಿ ಮೇಳಕ್ಕೆ ಬಂದು ಹಿಂಗಾರು ಜೋಳದ ೨೨೧೨ ಹೊಸ ತಳಿಯ ಬೀಜ ಖರೀದಿಸಿದ್ದೇನೆ. ೩ ಕೆಜಿಗೆ ೨೬೪ ರೂ. ಕೊಟ್ಟು ಖರೀದಿಸಿದ್ದು, ಉತ್ತಮ ಇಳುವರಿಯ ನಿರೀಕ್ಷೆ ಇದೆ.- ಫಕ್ಕೀರಗೌಡ ಕೆಂಚನಗೌಡರ, ರಾಣೆಬೆನ್ನೂರ ತಾಲೂಕು ಕುಸಗೂರ ರೈತ