ತಾವರಗೇರಾದಲ್ಲಿ ಬಿತ್ತನೆ ಆರಂಭ

ತಾವರಗೇರಾ ಜಮೀನೊಂದರಲ್ಲಿ ಬಿತ್ತನೆಯಲ್ಲಿ ತೊಡಗಿದ ರೈತ.
ತಾವರಗೇರಾ ಜಮೀನೊಂದರಲ್ಲಿ ಬಿತ್ತನೆಯಲ್ಲಿ ತೊಡಗಿದ ರೈತ.
Published on

ತಾವರಗೇರಾ: ಕಳೆದ ಒಂದು ವಾರದಿಂದ ಸುರಿದ ಮಳೆ 2-3 ದಿನಗಳಿಂದ ನಿಂತಿದ್ದು ರೈತರು ಬಿತ್ತನೆ ಆರಂಭಿಸಿದ್ದಾರೆ. ಈಗಾಗಲೇ ಜಮೀನುಗಳಲ್ಲಿ ಹೆಸರು, ಮೆಕ್ಕೆಜೋಳ, ನವಣೆ, ಸಜ್ಜೆ ಬಿತ್ತನೆ ಕಾರ್ಯ ಆರಂಭವಾಗಿದೆ. ಆರ್‌ಎಸ್‌ಕೆ ಪ್ರಕಾರ 5 ಕ್ವಿಂಟಾಲ್ ಹೆಸರು, 3 ಕ್ವಿಂಟಾಲ್ ಮೆಕ್ಕೆ ಜೋಳ, 2 ಕ್ವಿಂಟಾಲ್ ನವಣೆ, 8 ಕ್ವಿಂಟಾಲ್ ಸಜ್ಜೆ ಮಾರಾಟವಾಗಿದೆ ಎಂದು ಕೃಷಿ ಅಧಿಕಾರಿ ಆಶಾ ರಾಠೋಡ್ ತಿಳಿಸಿದ್ದಾರೆ. ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದೆ. ಮೇ 25ರಿಂದ ರೋಹಿಣಿ ಮಳೆ ಆರಂಭವಾಗಿದ್ದು, ಜೂ.8ರವರೆಗೆ ಇರಲಿದೆ. ಇದು ಬಿತ್ತಲು ಸೂಕ್ತ ಸಮಯವಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net