ಮಕ್ಕಳಲ್ಲಿ ಸಂವಿಧಾನದ ಆಶಯ ಬಿತ್ತಿರಿ

15 LXR 3
Published on

ಲಕ್ಷ್ಮೇಶ್ವರ: ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಪ್ರಜಾಪ್ರಭುತ್ವದ ಆಶಯ, ಚುನಾವಣಾ ಪ್ರಕ್ರಿಯೆ, ಪ್ರಜಾಪ್ರತಿನಿಧಿಗಳ ಆಯ್ಕೆ, ಮಂತ್ರಿಮಂಡಲ ರಚನೆ, ಹಕ್ಕು ಮತ್ತು ಕರ್ತವ್ಯಗಳ ಅರಿವು ಮೂಡಿಸಬೇಕಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಪ್ರಮುಖ ರಂಜನ ಪಾಟೀಲ ಹೇಳಿದರು.

ಶಿಗ್ಲಿಯ ಕೆ.ಜಿ. ಮುದಗಲ್ಲ ಪ್ರೌಢಶಾಲೆ, ಜಿ.ಎಫ್. ಉಪನಾಳ ಹಿರಿಯ ಪ್ರಾಥಮಿಕ ಶಾಲೆ, ಢವಳಗಿ ತಬ್ಬಣ್ಣ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಎಸ್.ಎಸ್. ಹುಲಗೂರ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಶನಿವಾರ ಶಾಲಾ ಸಂಸತ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಮ್ಮದು ವಿಶ್ವಮಾನ್ಯ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವದ ತತ್ವ-ಸಿದ್ಧಾಂತಗಳಲ್ಲಿಯೇ ಎಲ್ಲರೂ ಬದುಕಬೇಕಾಗುತ್ತದೆ. ವಿವಿಧತೆಯಲ್ಲಿ ಏಕತೆ ಹೊಂದಿದ ದೇಶದಲ್ಲಿ ನಾವೆಲ್ಲರೂ ಜಾತಿ, ಮತ, ಧರ್ಮಬೇಧ ಮರೆತು ಸ್ನೇಹ, ಸೌಹಾರ್ದದಿಂದ ಬದುಕಬೇಕು. ಹಕ್ಕುಗಳಿಗೆ ಬದ್ಧರಾಗಿರುವಂತೆ ಕರ್ತವ್ಯಗಳನ್ನು ಪಾಲಿಸುತ್ತಾ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಇರಬೇಕಾಗುತ್ತದೆ ಎಂದರು.

ಹಿರಿಯ ಪತ್ರಕರ್ತ ದಿಗಂಬರ ಪೂಜಾರ, ಕಾರ್ಯನಿತರ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಲ್ಲು ಕಳಸಾಪುರ, ಆರ್‌ಪಿ ಜ್ಯೋತಿ ಗಾಯಕವಾಡ ಮಾತನಾಡಿದರು. ಚಾಮರಾಜ ಹುಲಗೂರ, ಸಿ.ಆರ್. ಗೋಕಾವಿ, ಎಸ್.ಎ. ಹುಲಗೂರ, ರಾಜರತ್ನ ಹುಲಗೂರ, ಶಿವಾನಂದ ಮೂಲಮನಿ, ರಫೀಕ ಕಲಬುರ್ಗಿ, ಎಂ.ಜಿ. ಯಲವಗಿ, ಜಿ.ಸಿ. ದೇವಾಂಗಮಠ, ಎಸ್.ಯು. ಯರ್ಲಗಟ್ಟಿ ಇದ್ದರು. ಶಿಕ್ಷಕರಾದ ಎ.ವಿ. ತಿಮ್ಮಾಪುರ, ದಿವ್ಯಾ ಬೆಂತೂರ, ಡಿ.ಜಿ. ಮಠಪತಿ ಕಾರ್ಯಕ್ರಮ ನಿರ್ವಹಿಸಿದರು. ಎಲ್.ಎಸ್. ಅರಳಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರಪತಿಯಾಗಿ ವಿದ್ಯಾ ಮರಾಠೆ, ಮುಖ್ಯಮಂತ್ರಿಯಾಗಿ ತಸ್ಲಿಂ ಪಟ್ಟಣದ, ಉಪಮುಖ್ಯಮಂತ್ರಿಯಾಗಿ ವಿಕಾಸ ಮರಾಠೆ ಪ್ರಮಾಣವಚನ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net