

ಪರಶುರಾಮಪುರ: ಜಾತ್ಯತೀತ ಮನೋಭಾವನೆ ಮಕ್ಕಳಲ್ಲಿ ಬಿತ್ತುವ ಕೆಲಸ ಶಿಕ್ಷಕರು, ಪಾಲಕರು ಮಾಡಬೇಕು ಎಂದು ಶಾಲಾ ಸಮಿತಿ ಅಧ್ಯಕ್ಷ ದಿನೇಶ್ ಹೇಳಿದರು.
ಚಿಕ್ಕಗೊಂಡನಹಳ್ಳಿ ಸರ್ಕಾರಿ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಬಡ್ತಿ ಮುಖ್ಯಶಿಕ್ಷಕ ದಿನೇಶರೆಡ್ಡಿ, ಶಿಕ್ಷಕರಾದ ರುದ್ರಪ್ಪ, ಸುದರ್ಶನ್, ರೇವಣ್ಣ, ಅರುಣ್, ಅಣ್ಣಯ್ಯ, ವಿಜಯಲಕ್ಷ್ಮೀ, ಶೈಲಾ, ತ್ರಿವೇಣಿ, ಆನಂದಮೂರ್ತಿ, ಸುವರ್ಣಾ, ಕುಸುಮಾ, ರೀಟಾಮಣಿ, ವೀಣಾ ಇದ್ದರು.