

ಬೆಂಗಳೂರು: ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ ದೇಶದ ವಿಸ್ಕಿ ಮಾರಾಟದಲ್ಲಿ ದಕ್ಷಿಣ ಭಾರತ ರಾಜ್ಯಗಳ ಪ್ರಾಬಲ್ಯ ಹೊಂದಿದ್ದು, ವಿಸ್ಕಿ ಮಾರಾಟದಿಂದಲೇ ಆ ರಾಜ್ಯಗಳು ಶೇ.58 ಆದಾಯ ಗಳಿಸಿವೆ. ಉಳಿದ ಆದಾಯವನ್ನು ಉತ್ತರ ಭಾರತ ರಾಜ್ಯಗಳು ಪಡೆದುಕೊಂಡಿವೆ. ಈ ಮೂಲಕ ದೇಶದಲ್ಲಿ ವಿಸ್ಕಿ ಸೇವಿಸುವ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಿದೆ.
ಅಲ್ಲದೆ, ದೇಶದ ಇತರ ರಾಜ್ಯಗಳಗಿಂತ ಕರ್ನಾಟಕ ಶೇ.17 ಆದಾಯ ಗಳಿಸಿದ್ದು, ಈ ಮೂಲಕ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಗಳಿಸಿದೆ ಎಂದು ಭಾರತೀಯ ಮದ್ಯ ಪಾನೀಯ ಕಂಪನಿಗಳ ಒಕ್ಕೂಟ (ಸಿಐಎಬಿಸಿ) ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ಬಹಿರಂಗವಾಗಿದೆ.ಭಾರತದಲ್ಲಿ ತಯಾರಿಸಿದ ವಿದೇಶ ಮದ್ಯದ (ಐಎಂಎ್ಎಲ್) ಮಾರಾಟದಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಮುಂಚೂಣಿಯಲ್ಲಿದೆ.
2025ರ ಮಾ.31 ಅಂತ್ಯಕ್ಕೆ 23.18 ಕೋಟಿ ಬಾಕ್ಸ್ ವಿಸ್ಕ್ ಮಾರಾಟವಾಗಿದೆ. ಆದರೂ, 2023ಕ್ಕೆ ಹೋಲಿಸಿದರೆ 2024ರಲ್ಲಿ ವಿಸ್ಕಿ ಮಾರಾಟ ಪ್ರಮಾಣದಲ್ಲಿ ಶೇ.1.4 ಕುಸಿದಿದೆ. ದೇಶದ ಕೆಲ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿರುವುದು ಹಾಗೂ ಅಬಕಾರಿ ನೀತಿಗಳಿಂದ ಮಾರಾಟದ ಮೇಲೆ ಪರಿಣಾಮ ಬೀರಿದೆ. ಪ್ರತಿ ವರ್ಷ ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಲಾಗುತ್ತಿದೆ. ಬೆಲೆ ಹೆಚ್ಚಳದಿಂದಲೂ ಮಾರಾಟಕ್ಕೆ ಹೊಡೆತ ಬಿದ್ದಿದೆ ಎನ್ನುತ್ತಾರೆ ಸಿಐಎಬಿಸಿ ಮಹಾನಿರ್ದೇಶಕ ಅನಂತ್ ಎಸ್.ಅಯ್ಯರ್.
ದಕ್ಷಿಣ ಭಾರತ ರಾಜ್ಯಗಳು ಮದ್ಯ ಮಾರಾಟದಲ್ಲಿ ಶೇ.10 ಹೆಚ್ಚಳವಾಗಿದೆ. ಐಎಂಎ್ಎಲ್ ಮಾರಾಟದಲ್ಲಿ ಉತ್ತರ ಪ್ರದೇಶ ಶೇ.20 ಕೊಡುಗೆ ನೀಡುತ್ತಿದೆ. ಪಶ್ಚಿಮ ಬಂಗಾಳದಲ್ಲೂ ವ್ಯಾಪಾರ ವೃದ್ಧಿಯಾಗಿದೆ. ಮದ್ಯ ತಯಾರಿಕಾ ಕಂಪನಿಗಳು ಹೊಸ ಮಾದರಿ ಮದ್ಯವನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ದೊಡ್ಡ ಮಾರುಕಟ್ಟೆಯಾಗಿ ವಿಸ್ಕಿ ಹೊರಹೊಮ್ಮಿದೆ ಎಂದು ಹೇಳಿದರು.
ದೇಶದಲ್ಲಿ ವಿಸ್ಕಿ ಸೇವನೆ ಹೆಚ್ಚಳ:
ವರ್ಷದಿಂದ ವರ್ಷಕ್ಕೆ ಹಲವು ರಾಜ್ಯಗಳಿಗೆ ಮದ್ಯ ಮಾರಾಟದಿಂದ ಅತಿ ಹೆಚ್ಚು ಆದಾಯ ಬರುತ್ತಿದೆ. ಅಲ್ಲದೆ, ಆದಾಯ ಹೆಚ್ಚುತ್ತಿರುವ ನಡುವೆಯೂ ಮದ್ಯ ಸೇವಿಸುತ್ತಿರುವವರ ಸಂಖ್ಯೆಯೂ ಅಷ್ಟೇ ಏರುಗತಿಯಲ್ಲಿ ಸಾಗಿದೆ. 21 ವರ್ಷಗಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿರ್ಬಂಧವಿದ್ದರೂ ಮದ್ಯದಂಗಡಿಗಳಲ್ಲಿ ಹದಿಹರೆಯವರು ಮದ್ಯ ಚಟ ಅಂಟಿಸಿಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಬಿಯರ್ ಕುಡಿಯವವರಗಿಂತ ವಿಸ್ಕಿ ಕುಡಿಯವರ ಸಂಖ್ಯೆಯೂ ಹೆಚ್ಚಳವಾಗಿದೆ.