ಚಂದ್ರಪ್ಪ ಗೈರಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ : ಬಿಜೆಪಿ ಸಭೆಯಲ್ಲಿ ಗದ್ದಲ, ಮುತ್ತಿಗೆ

CTD HLK MLC 11
Published on

ಹೊಳಲ್ಕೆರೆ: ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದದಲ್ಲಿ ಬಿಜೆಪಿ ಅಭ್ಯರ್ಥಿ ಪರ ಭಾನುವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಗದ್ದಲದ ಗೂಡಾಯಿತು.

ಸ್ಥಳೀಯ ಶಾಸಕ ಎಂ.ಚಂದ್ರಪ್ಪ ಅನುಪಸ್ಥಿತಿಯಲ್ಲಿ ಸಭೆ ಆಯೋಜಿಸಿದ್ದರಿಂದ ಸಿಟ್ಟಿಗೆದ್ದ ಬೆಂಬಲಿಗರು, ಕಾರ್ಯಕರ್ತರು ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಅಭ್ಯರ್ಥಿ ಚಿದಾನಂದ ಗೌಡ ಅವರಿಗೆ ಮುತ್ತಿಗೆ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಚಂದ್ರಪ್ಪ ಅವರು ಕ್ಷೇತ್ರದಲ್ಲಿ ಇಲ್ಲದ ಸಮಯದಲ್ಲಿ ಸಭೆ ಆಯೋಜಿಸಿ ಅವಮಾನ ಮಾಡುತ್ತಿದ್ದೀರಾ. ಸ್ಥಳೀಯ ಶಾಸಕರು, ಮ ಮುಖಂಡರನ್ನು ನಿರ್ಲಕ್ಷಿೃಸಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಪಕ್ಷದ ನಗರಾಧ್ಯಕ್ಷ ಪ್ರವೀಣ್ ಮಾತನಾಡಿ, ಸಭೆ ಕುರಿತು ಶಾಸಕರು, ಸ್ಥಳೀಯ ಕಾರ್ಯಕರ್ತರಿಗೆ ಮಾಹಿತಿ ಇಲ್ಲ. ಈ ರೀತಿ ಗುಪ್ತವಾಗಿ ಸಭೆ ಆಯೋಜಿಸಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಕೂಡಲೇ ಸಭೆ ರದ್ದು ಮಾಡಿ ಎಂದು ಆಗ್ರಹಿಸಿದರು.

ಮುಖಂಡ ಬಸವರಾಜ್ ಮಾತನಾಡಿ, ಶಾಸಕರ ಗೈರಲ್ಲಿ ಪ್ರಚಾರ ಕೈಗೊಂಡಲ್ಲಿ ಮುಂದಿನ ಸಮಸ್ಯೆಗಳಿಗೆ ನೀವೆ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪರಸ್ಪರ ವಾಗ್ದಾದ, ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ತುಮಕೂರು ವಿಭಾಗದ ಪ್ರಭಾರಿ ಜಿ.ಎಂ.ಸುರೇಶ್, ತಾಲೂಕಾಧ್ಯಕ್ಷ ಸಿದ್ದೇಶ್ ಇತರರು ಮತ್ತೊಮ್ಮೆ ಸಭೆ ಆಯೋಜಿಸುವುದಾಗಿ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net