

ಮೈಸೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 11 ರಿಂದ 14 ರವರೆಗೆ ನಡೆಯಲಿರುವ 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಖೋ ಖೋ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಭಾಗಿಯಾಗಿದೆ.
ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ಪಿಜಿಎಸ್‌ಸಿ ಮಾನಸಗಂಗೋತ್ರಿಯ ಡಿ.ಎನ್.ಕಿರಣ್ ಕುಮಾರ್(ನಾಯಕ), ಮಹಾರಾಜ ಕಾಲೇಜಿನ ಬಿ.ಅಪ್ಪು, ಬಿ.ಕಿಶೋರ್, ಎಸ್.ಆರ್.ರಾಹುಲ್, ಆರ್.ದೀಪಕ್, ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ವಿ.ಪಿ.ಅರುಣ, ಆರ್.ಶರತ್, ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ ಎಂ.ವಿ.ಸುಹಾಸ್, ತಿ.ನರಸೀಪುರ ಪಿಆರ್‌ಎಂ ವಿಜಯ ಪ್ರಥಮ ದರ್ಜೆ ಕಾಲೇಜಿನ ಟಿ.ಆರ್.ಸಚಿನ್, ಮಂಟೇಸ್ವಾಮಿ, ಕ್ಯಾನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ಎಸ್.ಕಾರ್ತಿಕ್ ತಂಡದಲ್ಲಿದ್ದಾರೆ.
ತರಬೇತುದಾರ ಡಾ.ಕೆ.ಚಂದ್ರಶೇಖರ್, ವ್ಯವಸ್ಥಾಪಕ ಎ.ವಿ.ಪ್ರದೀಪ್ ಜತೆ ತಮ್ಮ ತಂಡ ಕ್ರೀಡಾಕೂಟದಲ್ಲಿ ಭಾಗಿಯಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.