ದಕ್ಷಿಣ ವಲಯ ಅಂತರ ವಿವಿ ಬ್ಯಾಡ್ಮಿಂಟನ್ ಪಂದ್ಯಾವಳಿ; ಚೆನ್ನೈನ ಎಸ್‌ಆರ್‌ಎಂ ಐಎಸ್‌ಟಿ ತಂಡ ಚಾಂಪಿಯನ್

28 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಎಸ್‌ಡಿಎಂ ಇಂಜಿನಿಯರಿ0ಗ್ ಕಾಲೇಜು ಆಯೋಜಿಸಿದ್ದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚೆನ್ನೈನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಟೂರ್ನಿಯಲ್ಲಿ ಭಾಗವಹಿಸಿದ್ದ 75 ವಿಶ್ವವಿದ್ಯಾಲಯಗಳಲ್ಲಿ ಚೆನ್ನೈ ಎಸ್‌ಆರ್‌ಎಂ ಮತ್ತು ಬೆಂಗಳೂರು ಜೈನ್ ವಿಶ್ವವಿದ್ಯಾಲಯ ತಂಡಗಳು ಫೈನಲ್ ಪ್ರವೇಶಿಸಿದ್ದವು. ಫೈನಲ್ ಸಿಂಗಲ್ಸ್ನಲ್ಲಿ ಚೆನ್ನೈ ತಂಡದ ಆರ್. ಪ್ರವಂದಿಕಾ ಬೆಂಗಳೂರು ಜೈನ್ ವಿವಿಯ ತಾನ್ಯಾ ಹೇಮಂತ್ ವಿರುದ್ಧ 10-21, 21-14, 13-21 ಅಂಕಗಳಿAದ ಪರಾಭವಗೊಂಡರು. ಡಬಲ್ಸ್ನಲ್ಲಿ ಚೆನ್ನೈ ತಂಡದ ಶ್ರೇಯಾ ಬಾಲಾಜಿ- ಎನ್. ಶ್ರೀನಿಽ ಜೋಡಿಯು ಜೈನ್ ವಿವಿಯ ಝೈನಬಾ ರೀಮ್‌ಸಿರಾಜ್- ವಿಭಾ ಜೋಡಿಯನ್ನು 21-16, 19-21, 21-9 ಅಂಕಗಳಿ0ದ ಮಣಿಸಿ ಟ್ರೋಫಿ ಆಸೆಯನ್ನು ಜೀವಂತವಾಗಿರಿಸಿತು. ರಿವರ್ಸ್ ಸಿಂಗಲ್ಸ್ನಲ್ಲಿ ಚೆನ್ನೈ ನ ಅಲಿಶಾ ನಾಯ್ಕ, ಜೈನ್ ವಿವಿಯ ಪ್ರೇರಣಾ ಶೇಟ್ ಅವರನ್ನು 21-7, 21- 7 ನೇರ ಸೆಟ್‌ಗಳಿಂದ ಮಣಿಸಿದರು.

ಚೆನ್ನೈ ತಂಡದ ಅಲಿಶಾ ನಾಯ್ಕ್, ಎಸ್. ಕವಿಪ್ರಿಯಾ, ಶ್ರೇಯಾ ಬಾಲಾಜಿ, ಎನ್. ಶ್ರೀನಿಧಿ, ಆರ್. ಪ್ರವಂದಿಕಾ ಟ್ರೋಫಿ ತಮ್ಮದಾಗಿಸಿಕೊಂಡರು. ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ತಾನ್ಯಾ ಹೇಮಂತ್, ಝೈನಬಾ ರೀಮ್‌ಸಿರಾಜ್, ಪ್ರೇರಣಾ ಶೇಟ್, ದೇವಿಕಾ ಅನೂಪ್ ಹಾಗೂ ವಿಭಾ ಅವರಿದ್ದ ತಂಡ ರನ್ನರ್ ಅಪ್‌ಗೆ ತೃಪ್ತಿ ಪಟ್ಟಿತು. ಕರ್ನೂಲ್‌ನ ರಾಯಲಸೀಮಾ ವಿಶ್ವವಿದ್ಯಾಲಯ ತಂಡದ ಸಿಎಚ್ ಎಸ್.ಆರ್. ಪ್ರಣವಿ, ಮಟ್ಟೆ ಆಕಾಂಕ್ಷಾ, ನಮ್ಮಿ ಜಾಹ್ನವಿ, ಫಾಹಿರಾ ಶಿರೀನ್ ಹಾಗೂ ಲಂಕಾ ಮಮೈಕ್ಯಾ ಅವರಿದ್ದ ತಂಡ 3ನೇ ಸ್ಥಾನ ಪಡೆಯಿತು. ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ನೆಯ್ಸಾ ಕಾರಿಯಪ್ಪ ಎ., ಸಲೋನಿ ಕುಮಾರಿ, ಅಮೃತಾ ಪಿ., ಆಯುಷಿ ಭಟ್ ಅವರಿದ್ದ ತಂಡ ಚತುರ್ಥ ಸ್ಥಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net