

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯ 2024&-25ರ ಆಥಿರ್ಕ ವರ್ಷದಲ್ಲಿ ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ವದ ಸಾಧನೆ ಮಾಡಿದೆ.
ನೈಋತ್ಯ ರೈಲ್ವೆ ಈ ಅವಧಿಯಲ್ಲಿ ಪ್ರಯಾಣಿಕರ ಆದಾಯ 3,172.82 ಕೋಟಿ ರೂ.ಗೆ ಹೆಚ್ಚಿಸಿದೆ. ಕಳೆದ ವರ್ಷದಲ್ಲಿ ಈ ಆದಾಯವು 3,090.5 ಕೋಟಿ ರೂ. ಆಗಿತ್ತು. ಪಾರ್ಸೆಲ್ ಆದಾಯವು ಕಳೆದ ವರ್ಷ 157.77 ಕೋಟಿ ರೂ. ಆಗಿದ್ದರೆ, ಈ ವರ್ಷ 166.6 ಕೋಟಿ ರೂ.ಗೆ ಏರಿಕೆ ಕಂಡಿದೆ. ಒಟ್ಟು ಆದಾಯ 8,340.90 ಕೋಟಿ ರೂ. ತಲುಪಿದೆ.
ವಾಣಿಜ್ಯ ಆದಾಯ 2023-24ರ ಅವಧಿಯ 78.90 ಕೋಟಿ ರೂ.ದಿಂದ ಈ ವರ್ಷ 91.60 ಕೋಟಿ ರೂ. ಗೆ ತಲುಪಿದೆ. ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 165.51 ಮಿಲಿಯನ್ ಪ್ರಯಾಣಿಕರು ಈ ವರ್ಷ ಪ್ರಯಾಣಿಸಿದ್ದರೆ, ಹಿಂದಿನ ವರ್ಷ ಈ ಸಂಖ್ಯೆ 162.16 ಮಿಲಿಯನ್ ಆಗಿತ್ತು.
2024-25ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಒಟ್ಟು 45.66 ಮಿಲಿಯನ್ ಟನ್ ಸರಕು ಸಾಗಣೆ ದಾಖಲಿಸಿದೆ . ಇದರಲ್ಲಿ ಹುಬ್ಬಳ್ಳಿ ವಿಭಾಗವು 32.69 ಮಿಲಿಯನ್ ಟನ್ ಹಾಗೂ ಮೈಸೂರು ವಿಭಾಗವು 10.89 ಮಿಲಿಯನ್ ಟನ್ ಗುರಿ ಮೀರಿಸಿದೆ. ಇನ್ನುಳಿದ ಲೋಡಿಂಗ್ ಅನ್ನು ಬೆಂಗಳೂರು ವಿಭಾಗ ನಿರ್ವಹಿಸಿದೆ.
ಇದೇ ಮಾರ್ಚ್ನಲ್ಲಿ ಅತ್ಯಧಿಕ ಮಾಸಿಕ ಸರಕು ಸಾಗಣೆ 5.024 ಮಿಲಿಯನ್ ಟನ್ ಅನ್ನು ದಾಖಲಿಸಿದ್ದು , ಇದು ಆಥಿರ್ಕ ವರ್ಷದ ಅತ್ಯುತ್ತಮ ಕಾರ್ಯಕ್ಷಮತೆಯಾಗಿದೆ. ಈ ವರ್ಷ 2.56 ಮಿಲಿಯನ್ ಟನ್ ಖನಿಜ ತೈಲವನ್ನು ಲೋಡ್ ಮಾಡಿದೆ. ಒಂದೇ ದಿನದಲ್ಲಿ 3,870 ಎಂಟು ಚಕ್ರಗಳ ವಾಹನಗಳನ್ನು ಲೋಡ್ ಮಾಡಿದ್ದು, ಈ ವರ್ಷ ದಾಖಲಾದ ಅತಿ ಹೆಚ್ಚಿನ ಲೋಡ್ ಆಗಿದೆ.
67.57 ಮಾರ್ಗ ಕಿಲೋಮೀಟರ್ಗಳ ವಿದ್ಯುದ್ದಿಕರಣವನ್ನು ರ್ಪೂಣಗೊಳಿಸಿದೆ. ಇದರಿಂದ ನೈಋತ್ಯ ರೈಲ್ವೆಯ ವ್ಯಾಪ್ತಿಯ 3,692 ಕಿಮೀ ಪೈಕಿ 3,323 ಕಿಮೀ ವಿದ್ಯುದ್ದಿಕರಣಗೊಂಡಿದೆ. 26.5 ಕಿಮೀ ಹೊಸ ರೈಲು ಮಾರ್ಗಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿದ್ದು, 39.1 ಕಿಮೀ ದ್ವಿಪಥ ಮಾರ್ಗವನ್ನೂ ರ್ಪೂಣಗೊಳಿಸಿದೆ .