

ಹುಬ್ಬಳ್ಳಿ : ಇಲ್ಲಿನ ನೈಋತ್ಯ ರೈಲ್ವೆಯ ಲೆಕ್ಕಪರಿಶೋಧನಾ ಮಹಾನಿರ್ದೇಶಕರ ಕಚೇರಿ ವತಿಯಿಂದ 4ನೇ ಲೆಕ್ಕಪರಿಶೋಧನಾ ದಿವಸ್ ಮತ್ತು ಲೆಕ್ಕಪರಿಶೋಧನಾ ಸಪ್ತಾಹ ಆಚರಿಸಲಾಯಿತು.
ಈ ಸಪ್ತಾಹವು ಲೆಕ್ಕಪರಿಶೋಧನಾ ಓಟ, ಪ್ರಬಂಧ ಬರವಣಿಗೆ, ರಸಪ್ರಶ್ನೆ ಮತ್ತು ಲೇಖನ ಬರೆಯುವ ಸ್ಪರ್ಧೆಗಳಂತಹ ಚಟುವಟಿಕೆ ಹಾಗೂ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಆಂತರಿಕ ಕಾರ್ಯುಗಾರಗಳನ್ನು ಒಳಗೊಂಡಿತ್ತು.
ನೈಋತ್ಯ ರೈಲ್ವೆಯ ಇಂಜಿನಿಯರಿಂಗ್, ಮೆಕ್ಯಾನಿಕಲ್, ವಾಣಿಜ್ಯ ಮತ್ತು ಲೆಕ್ಕಪತ್ರ ಇಲಾಖೆಗಳ ಅಧಿಕಾರಿಗಳೊಂದಿಗೆ ಮಧ್ಯಸ್ಥಗಾರರ ಚರ್ಚೆ ನಡೆಸಲಾಯಿತು.
ಶುಕ್ರವಾರ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಲೆಕ್ಕಪರಿಶೋಧನಾ ಮಹಾನಿರ್ದೇಶಕ ಆರ್. ನರೇಶ ಅವರು ಲೆಕ್ಕಪರಿಶೋಧನಾ ದಿನದ ಮಹತ್ವ ಹೇಳಿ, ಲೆಕ್ಕಪರಿಶೋಧನೆಯ ರೂಪಗಳು ಮತ್ತು ಪ್ರಕ್ರಿಯೆಗಳನ್ನು ವಿವರಿಸಿದರು.
ಲೆಕ್ಕ ಪರಿಶೋಧನಾ ನಿರ್ದೇಶಕ ಎಂ.ದಿನೇಶ ನಾಯ್ಕ ವಂದಿಸಿದರು.