ಕಾಲೇಜು ವಿದ್ಯಾರ್ಥಿಗಳಿಗೆ ವಾಲ್​ ಪೇಂಟಿಂಗ್​ ಸ್ಪರ್ಧೆ; ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಆಯೋಜನೆ

Painting
Published on

ಬೆಂಗಳೂರು: 'ಸ್ವಚ್ಛತಾ ಹಿ ಸೇವಾ' ಅಭಿಯಾನದ ಅಂಗವಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಕಾಲೇಜು ವಿದ್ಯಾರ್ಥಿಗಳಿಗೆ ಅ.29ರಂದು ಎಸ್​ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ಸ್ವಚ್ಛತೆ ವಿಷಯ ಆಧಾರಿತ ವಾಲ್​ ಪೇಂಟಿಂಗ್​ ಸ್ಪರ್ಧೆ ಆಯೋಜಿಸಿದೆ. ಭಾಗವಹಿಸಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಸೆ.24ರ ಒಳಗಾಗಿ ನೋಂದಾಯಿಸಿಕೊಳ್ಳಬಹುದು. ವಿವರಗಳು ಮತ್ತು ನೋಂದಣಿಗಾಗಿ ಮೊ.ಸಂ. 9164871716 ಸಂಪರ್ಕಿಸಬಹುದು. ಅಥವಾ denhmsbc2024@gmail.com ಇಮೇಲ್​ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net