ನೈರುತ್ಯ ರೈಲ್ವೆಯಲ್ಲಿ ಕೊಂಕಣ ರೈಲ್ವೆ ವಿಲೀನ ಚಿಂತನೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಸ್ತಾಪ

karandlaje
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಅಭಿವೃದ್ಧಿಯ ದೃಷ್ಟಿಯಿಂದ ಕೊಂಕಣ ರೈಲ್ವೆಯನ್ನು ನೈರುತ್ಯ ರೈಲ್ವೆಯ ಜೊತೆ ವಿಲೀನಗೊಳಿಸುವ ದ್ದೇಶದಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರ ಜೊತೆ ಕೂಡ ಈ ಕುರಿತು ಸಮಾಲೋಚನೆ ನಡೆಸಿದ್ದೇನೆ ಎಂದು ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನದೆಹಲಿಯ ಪ್ರಗತಿ ಮೈದಾನದಲ್ಲಿ ಅಕ್ಟೋಬರ್ 17_ರಿಂದ 19 ತನಕ ನಡೆಯುವ ‘ಜಾಗತಿಕ ಮೆರಿಟೈಮ್ ಇಂಡಿಯ ಸಮ್ಮಿತ್ 2023’ ಶೃಂಗಸಭೆಯ ಭಾಗವಾಗಿ ಪಣಂಬೂರು ಬಿಡಿಎಸ್ ಸಭಾಂಗಣದಲ್ಲಿ ಭಾನುವಾರ ಜರುಗಿದ ಕರ್ಟನ್ ರೈಸರ್ (ಸಮಾವೇಶ ಪೂರ್ವ) ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.
ಪ್ರಸ್ತುತ ಕೊಂಕಣ ರೈಲ್ವೆಯು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಫ್ಲಾಟ್‌ಫಾರ್ಮ್‌ಗಳ ವಿಸ್ತರಣೆ, ಹೆಚ್ಚುವರಿ ನಿಲ್ದಾಣಗಳು ಸಿಗುತ್ತಿಲ್ಲ. ಈ ವಿಭಾಗದಲ್ಲಿ ರೈಲುಗಳಲ್ಲಿ ಭದ್ರತೆಯ ಕೊರತೆಯೂ ಇದೆ. ಆದ್ದರಿಂದ ಕೊಂಕಣ ರೈಲ್ವೆಯನ್ನು ನೈರುತ್ಯ ರೈಲ್ವೆಯ ಜೊತೆಗೆ ವಿಲೀನಗೊಳಿಸಬೇಕು ಅಥವಾ ಕೊಂಕಣ ರೈಲ್ವೆಗೆ ಹಣ ಒದಗಿಸುವಂತೆ ಕೇಂದ್ರ ರೈಲ್ವೆ ಸಚಿವರ ಎದುರು ಬೇಡಿಕೆ ಮುಂದಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಕೇಂದ್ರದ ಬಂದರು, ಪ್ರವಾಸೋದ್ಯಮ, ಒಳನಾಡು ಜಲಸಾರಿಗೆ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್,  ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನವಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ.ಎ.ವಿ.ರಮಣ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿಎಲ್ ಮುಂತಾದವರು ಉಪಸ್ಥಿತರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net