ದ.ಭಾರತ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟ ವಿಜಯವಾಣಿಯ ಕಿರಣ್ ಪೈಗೆ ಚಿನ್ನದ ಪದಕ

mng--3 march krran pai
Published on

ಮಂಗಳೂರು: ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2ನೇ ದಕ್ಷಿಣ ಭಾರತ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಮಂಗಳೂರಿನ ಕಿರಣ್ ಪೈ 35 ವಯೋಮಿತಿಯ ಹ್ಯಾಮರ್ ಥ್ರೋ ನಲ್ಲಿ ಚಿನ್ನ (28.4 ಮೀ) ಹಾಗೂ ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ (23.78 ಮೀ.) ಪಡೆದಿದ್ದಾರೆ.

ಖೇಲೋ ಇಂಡಿಯಾ ಹ್ಯಾಮರ್ ಪದಕ ವಿಜೇತ ಯಮನೂರಪ್ಪ ಆರ್.ವಿ ಯವರಿಂದ ತರಬೇತಿ ಪಡೆದಿದ್ದಾರೆ. ಇವರು ಮಂಗಳೂರು ವಿಜಯವಾಣಿ ಕಚೇರಿಯಲ್ಲಿ ಸಹಾಯಕ ವ್ಯವಸ್ಥಾಪಕ (ಆಡಳಿತ ವಿಭಾಗ) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡಾಕೂಟದಲ್ಲಿ ದಕ್ಷಿಣ ಭಾರತದ ಕರ್ನಾಟಕ, ಕೇರಳ,ತಮಿಳುನಾಡು, ತೆಲಂಗಾಣದ ವಿವಿಧ ವಯೋಮಿತಿಯ 700 ಕ್ಕೂ ಹೆಚ್ಚಿನ ಅಥ್ಲೀಟ್ ಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net