

ದಾಬಸ್ಪೇಟೆ : ಕೆಂಪೇಗೌಡರು ಕೇವಲ ಬೆಂಗಳೂರು, ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದಣಭಾರತದ ಸಾಂಸತಿಕ ನಾಯಕ. ಅವರನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ತಿಳಿಸಿದರು.
ನೆಲಮಂಗಲ ತಾಲೂಕು ಶಿವಗಂಗಾ ಸರ್ಕಲ್ನಲ್ಲಿ ಶುಕ್ರವಾರ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕೆಂಪೇಗೌಡರ ದೂರದೃಷ್ಟಿ, ನಾಯಕತ್ವ ಗುಣ, ಸಾಮಾಜಿಕ ನ್ಯಾಯದ ಪರಿಕಲ್ಪನೆ, ಅವರ ಮೌಲ್ಯಗಳನ್ನು ಜನರಿಗೆ ತಲುಪಿಸಬೇಕು. ಹಲವು ವರ್ಷಗಳ ಹಿಂದೆಯೇ ವ್ಯಾಪಾರಿಗಳನ್ನು ಬೆಂಗಳೂರಿಗೆ ಕರೆ ತಂದು ಅವರವರ ವೃತ್ತಿಗೆ ಅನುಗುಣ ಪೇಟೆ ನಿರ್ಮಿಸಿಕೊಟ್ಟು ಇಡೀ ವಿಶ್ವವೇ ಬೆಂಗಳೂರಿನತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ಒಕ್ಕಲಿಗರ ಜಾಗೃತಿ ಸಂ ಸೋಂಪುರ ಶಾಖೆಯ ಖಜಾಂಚಿ ಎಸ್.ಟಿ.ಸಿದ್ದರಾಜು ಮಾತನಾಡಿ, ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಇಂದು ಬೃಹತ್ತಾಗಿ ಬೆಳೆದು ವಿಶ್ವಮಾನ್ಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬಿ.ಎಂ.ಶ್ರೀನಿವಾಸ್, ಮುಖಂಡರಾದ ಬಿ.ಎನ್.ಮನೋಹರ, ಬಿ.ಪಿ.ಶ್ರೀನಿವಾಸಮೂರ್ತಿ, ಜಿ.ವೆಂಕಟೇಶ, ನರಸೀಪುರ ನಾಗರಾಜು, ಬೈರೇಶ್, ಮುರಳೀದರ, ಕರವೇ ಅಧ್ಯಕ್ಷ ಎಂ.ಸಿ.ಮೋಹನ ಕುಮಾರ, ಮಾಚರನಹಳ್ಳಿ ರಾವೇಂದ್ರ, ಅಗಳಕುಪ್ಪೆ ಕೆಂಪರಾಮಯ್ಯ, ಪಂಚಾಕ್ಷರಯ್ಯ, ರಮೇಶ್, ಒಕ್ಕಲಿಗರ ಜಾಗೃತಿ ಸಂ ಸೋಂಪುರ ಅಧ್ಯಕ್ಷ ಗಂಗರುದ್ರಯ್ಯ, ವೆಂಕಟಪ್ಪ, ಮಂಜುನಾಥ, ಹನುಂತರಾಜು, ನಾಗವೇಣಿ, ಉಮಾದೇವಿ, ನಳಿನಾ, ಶ್ವೇತಾ, ರಾಮಚಂದ್ರ, ಗೋಪಾಲ, ಖುಶಿಲ್ ಕುಮಾರ, ತಿಮ್ಮೇಗೌಡ, ರು, ಉಮೇಶ, ಚಂದ್ರಯ್ಯ, ಕುಮಾರ ಇದ್ದರು.