ಪರಿಷತ್‌ನಲ್ಲಿ ಪದವೀಧರರ-ಶಿಕ್ಷಕರ ಪರ ಧ್ವನಿ; ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಭರವಸೆ

south east graduate constituency, election, hiriyuru,
Published on

ಹಿರಿಯೂರು: ಆಗ್ನೇಯ ಪಧವೀದರ ಕ್ಷೇತ್ರದಿಂದ ಚುನಾಯಿತನಾದರೆ ವಿಧಾನ ಪರಿಷತ್‌ನಲ್ಲಿ ಶಿಕ್ಷಕರು-ಪದವೀಧರರ ಪರ ಧ್ವನಿ ಎತ್ತುವೆ ಎಂದು ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.

ನಗರದ ಎ.ಕೃಷ್ಣಪ್ಪ-ರೋಟರಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು-ಪದವೀಧರರ ಸಮಸ್ಯೆಗಳಿಗೆ ಇಲ್ಲಿಯವರೆಗೂ ಕ್ಷೇತ್ರ ಪ್ರತಿನಿಸಿದವರು ಸ್ಪಂದಿಸಿಲ್ಲ, ಈ ಬಾರಿ ಪ್ರಬುದ್ಧ ಮತದಾರರು ಬದಲಾವಣೆ ಬಯಸಿದ್ದಾರೆ ಎಂದರು.

ವಕೀಲ ಸಂಜಯ್ ಮಾತನಾಡಿ, ಚುನಾವಣೆಯಲ್ಲಿ ವಕೀಲರನ್ನು ಕೇವಲ ಮತದಾರ ಎಂದು ಭಾವಿಸಿ ನಂತರ ಕಡೆಗಣಿಸಿದವರೇ ಹೆಚ್ಚು. ಡಿ.ಟಿ.ಶ್ರೀನಿವಾಸ್ ನಮ್ಮನ್ನು ನಿರ್ಲಕ್ಷಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಸರ್ಕಾರಿ ನೌಕರರ ಸಂಘಧ ಅಧ್ಯಕ್ಷ ಮಧುರೆ, ತಾಲೂಕು ಗೊಲ್ಲ ಸಂಘದ ಅಧ್ಯಕ್ಷ ರಂಗಸ್ವಾಮಿ, ಬಿ.ಕೆ. ಉಗ್ರಮೂರ್ತಿ, ಸುರೇಶ್, ಚಿರಂಜೀವಿ, ಗಣೇಶ್, ಬಾಲಕೃಷ್ಣ ಇತರರಿದ್ದರು.

ಹಿರಿಯೂರು, ಆಗ್ನೇಯ ಪಧವೀದರ ಕ್ಷೇತ್ರ, ಚುನಾವಣೆ, south east graduate constituency, election, hiriyuru,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net