

ಮುಂಡರಗಿ: ತಾಲೂಕಿನ ಪೇಠಾಲೂರ ಗ್ರಾಮದ ರೈತ ಅಶೋಕ ಕಬ್ಬೇರಳ್ಳಿ ಅವರ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಗುರುವಾರ ಸೋಲಾರ್‌ಚಾಲಿತ ಯಂತ್ರದ ಮೂಲಕ ತೊಗರಿ ಬೆಳೆ ಕುಡಿ ಚಿವುಟುವಿಕೆ ಪ್ರಾತ್ಯಕ್ಷಿಕೆ ಹಾಗೂ ಟ್ರ್ಯಾಕ್ಟರ್‌ಚಾಲಿತ ಸ್ಟ್ರೇಯರ್ ಮುಖಾಂತರ ಪಲ್ಸ್ ಮ್ಯಾಜಿಕ್ ಸಿಂಪಡಣೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಗದಗ ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದ ಸರಿಯಾದ ಸಮಯದಲ್ಲಿ ಔಷಧ ಮತ್ತು ರಸಗೊಬ್ಬರ ಸಿಂಪಡಣೆ ಆಗುತ್ತಿಲ್ಲ. ಟ್ರ್ಯಾಕ್ಟರ್‌ಚಾಲಿತ ಭೂಮ್ ಸ್ಟ್ರೇಯರ್ ಮುಖಾಂತರ ಪಲ್ಸ್ ಮ್ಯಾಜಿಕ್ ಸಿಂಪಡಣೆ ಮಾಡುವುದು ರೈತರಿಗೆ ಅನುಕೂಲಕಾರಿಯಾಗಿದೆ ಎಂದರು.
ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವಿನಾಯಕ ನಿರಂಜನ ಮಾತನಾಡಿ, ತೊಗರಿ ಬೆಳೆಯಲ್ಲಿ ಸೋಲಾರ್‌ಚಾಲಿತ ಯಂತ್ರದ ಮೂಲಕ ಕುಡಿ ಚಿವುಟುವುದರಿಂದ ಹೆಚ್ಚಿನ ಚಿಗುರು ಬಂದು ಇಳುವರಿ ಹೆಚ್ಚು ಪಡೆಯಬಹುದು. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿದರು. ಬೆಂಗಳೂರು ಕೇಂದ್ರ ಕಚೇರಿಯ ಉಪ ಕೃಷಿನಿರ್ದೇಶಕ ಮಂಜು ಎ.ಸಿ. ಅವರ ತಂಡ ಆಗಮಿಸಿ ವಿವಿಧ ಬೆಳೆ ಉತ್ಪಾದನಾ ತಾಂತ್ರಿಕತೆಗಳ ಛಾಯಾಚಿತ್ರ ಸೆರೆಹಿಡಿದರು.
ಡಂಬಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ, ಎಸ್.ಎಸ್. ಮೂಡಲಗಿ, ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಗೌರಿಶಂಕರ ಸಜ್ಜನರ, ಅಕ್ಕಮಹಾದೇವಿ ಶಲವಡಿ, ನಾಗರಾಜ ಬೋವಿ, ರೈತರಾದ ಸಿದ್ದನಗೌಡ ಕರಿಗೌಡ್ರ, ರವಿ ಚಾಕಲಬ್ಬಿ, ರವಿ ಹ್ಯಾಟಿ, ಶ್ರೀಕಾಂತ ತಿಮ್ಮಾಪುರ, ತಿಮ್ಮಣ್ಣ ರಾಟಿ, ಸೋಮಪ್ಪ ಕಬ್ಬೇರಳ್ಳಿ, ಶರಣಪ್ಪ ಕೆಂಚನಗೌಡ್ರ, ಷಣ್ಮುಖಪ್ಪ ಕಾಯಣ್ಣವರ, ಸುಭಾಸ ಚಾಕಲಬ್ಬಿ, ಬಸವರಾಜ ಹ್ಯಾಟಿ, ಶ್ರೀಕಾಂತ ಸಂಶಿ, ಮಂಜುನಾಥ ಕುರ್ತಕೋಟಿ, ಪ್ರಕಾಶ ಹೂಗಾರ, ರಾಜಪ್ಪ ನಿಂಗನೌಡ್ರ, ಮುತ್ತಪ್ಪ ಹೂಗಾರ ಉಪಸ್ಥಿತರಿದ್ದರು. ಗುಡದಪ್ಪ ಲಿಂಗಶೆಟ್ಟರ ಕಾರ್ಯಕ್ರಮ ನಿರೂಪಿಸಿದರು.