

ಕುಂದಾಪುರ: ಕುಂದಾಪುರ ವಲಯದ ಧ್ವನಿ ಬೆಳಕು ಸಂಘಟನೆ 14ನೇ ಮಹಾಸಭೆ ಇತ್ತೀಚೆಗೆ ಕುಂದಾಪುರದಲ್ಲಿ ನಡೆಯಿತು. ಕುಂದಾಪುರ ವಲಯದ ಧ್ವನಿ ಬೆಳಕು ಸಂಘಟನೆಯ ಸತೀಶ್ ಮುಳ್ಳುಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ರಾಜ್ಯ ಜತೆ ಕಾರ್ಯದರ್ಶಿ ದಾಮೋದರ್ ಶೆಟ್ಟಿಗಾರ್ ಮಾತನಾಡಿದರು. ಜನಸೇವೆಯ ಆಶಾಕಿರಣ ಸುರೇಂದ್ರ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕೆಸರುಗದ್ದೆ ಕ್ರೀಡೋತ್ಸವದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘಟನೆಯ ರಾಜ್ಯ ನಿರ್ದೇಶಕ ಬಿ.ಹಸೈನಾ, ರಾಜ್ಯ ಸಂಘಟನಾ ಪ್ರತಿನಿಧಿ ಎಚ್.ಉದಯ ಆಚಾರ್ಯ ಬೈಂದೂರು, ಜಿಲ್ಲಾಧ್ಯಕ್ಷ ಧರ್ಮರಾಜಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ನಾಯಕ್, ಕೋಶಾಧಿಕಾರಿ ಎಂ.ಕೆ.ಗಣೇಶ್ ಬ್ರಹ್ಮಾವರ, ಜಿಲ್ಲಾ ಉಪಾಧ್ಯಕ್ಷ ರೋನಿ ಬೆರಟ್ಟೊ, ಉಷಾ ಸತೀಶ್, ವಲಯದ ಗೌರವ ಸಲಹೆಗಾರ ಸರ್ದಾರ್, ಬೈಂದೂರು ವಲಯ ಅಧ್ಯಕ್ಷ ಗಣೇಶ್ ಪೂಜಾರಿ, ಬ್ರಹ್ಮಾವರ ವಲಯಾಧ್ಯಕ್ಷ ಚಂದ್ರಶೇಖರ್ ಪೂಜಾರಿ, ಉಡುಪಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿಗಾರ್, ಕಾಪು ವಲಯಾಧ್ಯಕ್ಷ ಸುಧಾಕರ್ ಸುವರ್ಣ, ಕಾರ್ಕಳ ವಲಯಾಧ್ಯಕ್ಷ ನವೀನ್ ಲೋಬೊ ಉಪಸ್ಥಿತರಿದ್ದರು.
ವಲಯದ ಕ್ರೀಡಾ ಕಾರ್ಯದರ್ಶಿ ಶಂಕರ್ ಕಂಚುಗರ್ ಸನ್ಮಾನ ಪತ್ರ ಹಾಗೂ ಕಾರ್ಯದರ್ಶಿ ರಾಘವೇಂದ್ರ ಶೇರೆಗಾರ್ ವರದಿ ವಾಚಿಸಿದರು. ವಲಯದ ಕೋಶಾಧಿಕಾರಿ ಸತೀಶ್ ಪೂಜಾರಿ ಲೆಕ್ಕಪತ್ರ ಮಂಡಿಸಿದರು. ಡಿಜೆ ರಂಜು ಕಾರ್ಯಕ್ರಮ ನಿರ್ವಹಿಸಿದರು.