ಆತ್ಮ ಶುದ್ಧೀಕರಣದತ್ತ ಗಮನ ಹರಿಸಿ

Published on

ಕಂಪ್ಲಿ: ಮೋಕ್ಷ ಸಾಧಿಸಲು ಉನ್ನತ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜೈನ ಸಾಧ್ವಿ ಶ್ರೀ ಮಂಗಲಜ್ಯೋತಿಜಿ ಹೇಳಿದರು.

ಪಟ್ಟಣದ ಜೈನ ಮುನಿಸೂರತ್‌ಸ್ವಾಮಿ ಶ್ವೇತಾಂಬರ್ ಸಂಘ ಆಯೋಜಿಸಿದ್ದ ಧಾರ್ಮಿಕ ಪ್ರವಚನದಲ್ಲಿ ಶುಕ್ರವಾರ ಮಾತನಾಡಿದರು. ಆಸೆಯಿಂದ ಲಾಭ, ನಷ್ಟ, ಸುಖ, ದುಃಖಗಳು ಉಂಟಾಗುತ್ತವೆ. ಲೌಕಿಕ ಜೀವನದಲ್ಲಿದ್ದುಕೊಂಡು ಅಲೌಕಿಕ ಜೀವನ ಸಾಗಿಸಲು ಆಸೆ ತೊರೆಯಬೇಕು. ಆತ್ಮಶುದ್ಧೀಕರಣದತ್ತ ಮನಸ್ಸು ಮಾಡಬೇಕು ಎಂದರು. ಜೈನ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಪ್ರಮುಖರಾದ ಶಾಂತಿಲಾಲ್ ಬಾಲಾರ್, ಪಾರಸ್‌ಮಲ್ ಹುಂಡಿಯಾ, ಫತೇಕುಮಾರ್ ಭಾಪ್ಣ, ಶಾಂತಿಲಾಲ್ ಸಿಂಘ್ವಿ, ಮನೋಜ್ ಸಿಂಘ್ವಿ, ಕಮಲೇಶ್ ಸಿಂಘ್ವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net