

ಹುಬ್ಬಳ್ಳಿ: ಧಾರವಾಡ ತಾಲೂಕಿನ ಅಮ್ಮಿನಬಾವಿಯಲ್ಲಿ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಶಾಖೆಯ ಉದ್ಘಾಟನೆ ಹಾಗೂ ನವೋದಯ ಸ್ವಸಹಾಯ ಸಂಗಳ ಆರಂಭೋತ್ಸವ ಇತ್ತೀಚೆಗೆ ಸಂಭ್ರಮದಿಂದ ನಡೆಯಿತು.
ನೂತನ ಶಾಖೆ ಉದ್ಘಾಟಿಸಿದ ವೈಶುದೀಪ ಫೌಂಡೇಷನ್ ಅಧ್ಯೆ ಶಿವಲೀಲಾ ಕುಲಕಣಿರ್, ಗ್ರಾಮೀಣ ಜನರಿಗೆ ಸಕಾಲಕ್ಕೆ ಆಥಿರ್ಕ ನೆರವು ರ್ದುಲಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಹಕಾರ ಸಂಗಳು ಪ್ರಾಮಾಣಿಕ ಸೇವೆ ನೀಡುತ್ತಿರುವುದು ವರದಾನವಾಗಿ ಪರಿಣಮಿಸಿದೆ ಎಂದರು.
ಠೇವಣಿ ಪತ್ರಗಳನ್ನು ವಿತರಣೆ ಮಾಡಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ. ನಂಜೇಗೌಡ, ಸಹಕಾರ ವಲಯವು ಪ್ರಸ್ತುತ ಜನರ ಬಹುತೇಕ ಬೇಡಿಕೆಗಳನ್ನು ಪೂರೈಸುವ ಮಹತ್ವದ ವ್ಯವಸ್ಥೆಯಾಗಿ ಕೆಲಸ ಮಾಡುತ್ತಿದೆ. ಸಹಕಾರ ಕ್ಷೇತ್ರದ ಭಾಗವಾಗಿ ಎರಡು ದಶಕದಿಂದ ಆರಂಭವಾದ ಸೌಹಾರ್ದ ವ್ಯವಸ್ಥೆ ಇದೀಗ ಹೆಚ್ಚಿನ ವೇಗ ಪಡೆದುಕೊಂಡಿದೆ. ಕೇಂದ್ರ ಸರ್ಕಾರವು ಸಹ ಸಹಕಾರ ವ್ಯವಸ್ಥೆಯನ್ನು ಪ್ರತಿ ಹಳ್ಳಿ, ಪಟ್ಟಣಗಳಿಗೆ ವಿಸ್ತರಿಸಲು ಪ್ರಯತ್ನಿಸುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮಿನಬಾವಿ ಅಭಿನವ ಶ್ರೀ ಶಾಂತಲಿಂಗ ಶಿವಾಚಾರ್ಯರು, ಸುಳ್ಳದ ಶ್ರೀ ಸಿದ್ಧರಾಮ ಶಿವಾಚಾರ್ಯರು, ಗರಗದ ಶ್ರೀ ಪ್ರಶಾಂತ ದೇವರು ವಹಿಸಿದ್ದರು.
ಮಾಜಿ ಶಾಸಕಿ ಸೀಮಾ ಮಸೂತಿ, ಸ್ವಸಹಾಯ ಸಂಗಳಿಗೆ ಚಾಲನೆ ನೀಡಿದರು. ಉದ್ಯಮಿ ಗೋವಿಂದ ಜೋಶಿ ಅವರು ಸಾಲಪತ್ರ ಹಾಗೂ ಗ್ರಾಪಂ ಅಧ್ಯೆ ನೀಲವ್ವ ತಿದಿ ಅವರು ಶೇರು ಪತ್ರಗಳನ್ನು ವಿತರಣೆ ಮಾಡಿದರು. ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ ಅಧ್ಯಕ್ಷತೆ ವಹಿಸಿದ್ದರು.
ಸಂಯುಕ್ತ ಸಹಕಾರಿ ನಿರ್ದೇಶಕಿ ಶೈಲಜಾ ತಪ್ಪಲಿ, ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ನಿರ್ದೇಶಕ ಸಿದ್ದಪ್ಪ ಸಪ್ಪೂರಿ, ಸಹಕಾರ ಭಾರತಿ ಅಧ್ಯಕ್ಷ ರಮೇಶ ವೈದ್ಯ, ಸುನೀಲ ಗುಡಿ, ಈಶ್ವರ ಶಿವಳ್ಳಿ, ಪ್ರೇಮಾ ಹೊರಕೇರಿ, ಬಸವಣ್ಣೆಪ್ಪ ನವಲಗುಂದ, ರುದ್ರಪ್ಪ ಕುಂದಗೋಳ, ಇತರರು ಇದ್ದರು.
ಸಹಕಾರಿ ಸಂಸ್ಥಾಪಕ ಮಲ್ಲಿಕಾರ್ಜುನ ಹೊರಕೇರಿ ಪ್ರಾಸ್ತಾವಿಕ ಮಾತನಾಡಿದರು. ಉಮಾ ಪ್ರಾಥಿರ್ಸಿದರು. ಆಶ್ಮಾ ನದಾ್ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ದೊಡ್ಡಮನಿ ವಂದಿಸಿದರು.